Breaking News

ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Spread the love

ಮುಂಬಯಿ: ರಾಜ್ಯದ ಮಹಿಳೆಯರಿಗೆ ಮಾಸಿಕ 3,000ರೂ. ಸಹಾಯ ಧನ, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ, 3 ಲಕ್ಷ ರೂ.ಗಳವರೆಗಿನ ರೈತರ ಸಾಲ ಮನ್ನಾ, ನಿರುದ್ಯೋಗಿ ಯುವಜನತೆಗೆ ಮಾಸಿಕ 4,000 ರೂ. ನೆರವು.

ಇವು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ(ಎಂವಿಎ) ಘೋಷಿಸಿರುವ ಗ್ಯಾರಂಟಿಗಳು.

ಉದ್ಧವ್‌ ಶಿವಸೇನೆ, ಶರದ್‌ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಮೈತ್ರಿಕೂಟವಾದ ಎಂವಿಎ ಪ್ರಣಾಳಿಕೆ ಬಿಡುಗಡೆಗೊಳಿಸಿ, ಭರ್ಜರಿ ಘೋಷಣೆಗಳನ್ನು ಮಾಡಿದೆ.

ಮಹಾಯುತಿ ಸರಕಾರ‌ದ “ಲಡ್ಕಿ ಬಹೀನ್‌’ ಯೋಜನೆಯಡಿ ನೀಡುತ್ತಿರುವ 1500ರೂ.ಗಳನ್ನು ತಾನು ಅಧಿಕಾರಕ್ಕೆ ಬಂದರೆ 2,100 ರೂ.ಗಳಿಗೆ ಏರಿಸುವುದಾಗಿಯೂ ಎಂವಿಎ ಘೋಷಿಸಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ