ತಿರುವನಂತಪುರ: ಜಸ್ಟೀಸ್ ಕೆ. ಹೇಮಾ ಸಮಿತಿ ವರದಿ (Hema Committee Report) ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಹಲವು ಕಲಾವಿದರ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಈ ಪಟ್ಟಿಯಲ್ಲಿ ಮಾಲಿವುಡ್ ನಟ “ಪ್ರೇಮಂ’ ಖ್ಯಾತಿಯ ನಿವಿನ್ ಪೌಲಿ (Malayalam actor Nivin Pauly) ವಿರುದ್ಧವೂ ದೂರು ದಾಖಲಾಗಿತ್ತು.
ಕೇರಳದ ನೆರಿಯಮಂಗಲಂ ನಿವಾಸಿಯಾಗಿರುವ ದೂರುದಾರೆ ನವೆಂಬರ್ 2023ರಲ್ಲಿ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ನಿವಿನ್ ಪೌಲಿ ತಮ್ಮ ಮೇಲೆ ದುಬೈಯ ಹೊಟೇಲ್ ವೊಂದರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ನಿವಿನ್ ಸೇರಿ 6 ಮಂದಿಯ ವಿರುದ್ಧ ಮಹಿಳೆ ಆರೋಪ ಮಾಡಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ನಿವಿನ್ 6ನೇ ಆರೋಪಿ ಆಗಿದ್ದರು. ದೂರು ದಾಖಲಾದ ಬಳಿಕ ʼಪ್ರೇಮಂʼ ನಟ ಆರೋಪಗಳೆಲ್ಲ ಸುಳ್ಳು ಇದೊಂದು ಆಧಾರರಹಿತ ಸುಳ್ಳು ಆರೋಪ. ಸತ್ಯ ಹೊರತರಲು ಯಾವ ಹಂತಕ್ಕೆ ಬೇಕಾದರೆ ಹೋಗುತ್ತೇನೆಂದು ಕಾನೂನು ಹೋರಾಟವನ್ನು ಮಾಡುತ್ತೇನೆ ಎಂದಿದ್ದರು.