ಬೆಳಗಾವಿ: ಇಲ್ಲಿನ ಹಿಂಡಲಗಾದ ಗಣೇಶ ದೇವಸ್ಥಾನ ಬಳಿಯ ಹೊಂಡದಲ್ಲಿ ತಾಯಿ, ಮಗ ಬಿದ್ದು ಮೃತಪಟ್ಟಿದ್ದಾರೆ. ಭಾನುವಾರ ಅವರ ಮೃತದೇಹ ಪತ್ತೆಯಾಗಿವೆ.
ತಾಲ್ಲೂಕಿನ ಕಲಕಾಂಬ ಗ್ರಾಮದ ನಿವಾಸಿ ಕವಿತಾ ಬಸವಂತ ಜುನೇಬೆಳಗಾಂವಕರ(35), ಅವರ ಪುತ್ರ ಸಮರ್ಥ(12) ಮೃತರು.
‘ಕವಿತಾ ಮತ್ತು ಸಮರ್ಥ ಅ.30ರಂದು ಮನೆಯಿಂದ ಕಾಣೆಯಾಗಿದ್ದರು.
ಅವರು ಯಾವಾಗ ಕೆರೆಗೆ ಬಿದ್ದಿದ್ದಾರೆ ಎಂದು ಗೊತ್ತಾಗಿಲ್ಲ. ಕೌಟುಂಬಿಕ ಸಮಸ್ಯೆಯೇ ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.