ಚಾಮರಾಜನಗರ: ಸಚಿವರಾಗಲು ಎಚ್.ವಿಶ್ವನಾಥ್ ಅನರ್ಹ ಎಂದು ಹೈಕೋರ್ಟ್ ತೀರ್ಪು ನೀಡಿರುವುದು ದುರದೃಷ್ಟಕರವಾಗಿದ್ದು, ಮುಂದೆ ವಿಶ್ವನಾಥ್ ಪರ ಕಾನೂನು ಹೋರಾಟ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದರು.ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಪರ ಕಾನೂನು ಹೋರಾಟ ಮಾಡುತ್ತೇವೆ. ಅವರ ಪರವಾಗಿ ಪಕ್ಷ ಕೂಡ ನಿಲ್ಲುತ್ತದೆ. ವಿಶ್ವನಾಥ್ ಪರ ತೀರ್ಪು ಬರುತ್ತೆದೆ ಎಂಬ ಭರವಸೆ ಇತ್ತು ಎಂದು ತಿಳಿಸಿದರು.
ಹೋರಾಟ ನಡೆಸಲು ಈಗಾಗಲೇ ಕಾನೂನು ತಜ್ಞರ ಜೊತೆ ಸಹ ಸಮಾಲೋಚನೆ ನಡೆಸಿದ್ದೇವೆ. ವಿಶ್ವನಾಥ್ ಪರ ತೀರ್ಪು ಬರುತ್ತದೆ ಎಂಬ ಖುಷಿ ಇತ್ತು. ಆದರೆ 2023ರ ವರೆಗೆ ಮಂತ್ರಿಯಾಗಲು ಬರುವುದಿಲ್ಲ ಎಂಬ ನ್ಯಾಯಾಲಯದ ತೀರ್ಪು ನಿಜವಾಗ್ಲೂ ಬೇಸರ ತರಿಸಿದೆ ಎಂದರು.

ವಿಶ್ವನಾಥ್ ಅವರನ್ನು ಮಂತ್ರಿ ಮಾಡಲು ಸಿಎಂ ಯಡಿಯೂರಪ್ಪ ಸಹ ಮನಸ್ಸು ಮಾಡಿದ್ದರು. ಈ ಸರ್ಕಾರ ಬರಲು ವಿಶ್ವನಾಥ್ ಕೂಡ ಕಾರಣವಾಗಿದ್ದು, ಅವರ ಪರ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
Laxmi News 24×7