ಬೆಂಗಳೂರು, ಅಕ್ಟೋಬರ್ 29: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಮಂಗಳವಾರರ (ಅಕ್ಟೋಬರ್ 29) ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ವಾದ ವಿವಾದ ಆಲಿಸಿದ ನ್ಯಾಯಾಧೀಶರು, ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ನಾಳೆ ಬುಧವಾರ ಅಕ್ಟೋಬರ್ 30ಕ್ಕೆ ಕಾಯ್ದಿರಿಸಿದ್ದಾರೆ.
ಅರ್ಜಿ ವಿಚಾರಣೆ ವೇಳೆ ನಟ ದರ್ಶನ್ ತೂಗುದೀಪ ಅವರ ಆರೋಗ್ಯ ಸಮಸ್ಯೆಯನ್ನು, ಅವರಿಗೆ ಚಿಕಿತ್ಸೆ ಅಗತ್ಯತೆ ಕುರಿತು ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್ ಅವರು ಮಂಡಿಸಿದರು. ವಿಚಾರಣಾಧೀನ ಖೈದಿಗೂ ಚಿಕಿತ್ಸೆ ಅಗತ್ಯತೆ ಇದೆ. ನಾವು ಇದನ್ನು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿರಲಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು. ಖೈದಿಗೆ ಉತ್ತಮ ಆರೋಗ್ಯದ ಹಕ್ಕಿದೆ ಎಂದು ವಕೀಲರು ದರ್ಶನ್‌ಗೆ ಜಾಮೀನು ನೀಡುವಂತೆ ನ್ಯಾಯಮೂರ್ತಿಗಳಲ್ಲಿ ಕೋರಿದರು.
ಇದರ ಬೆನ್ನಲ್ಲೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರ ಸಹ ವಾದ ಮಂಡನೆ ಮಾಡಿದರು. ಹಳೆಯ ಎಂಆರ್‌ಐ ರಿಪೋರ್ಟ್‌ನಲ್ಲಿ ಅಷ್ಟೇನು ಸಮಸ್ಯೆ ಇಲ್ಲ ಎಂದು ಹೇಳಲಾಗಿತ್ತು. ಹೀಗೆನ್ನುತ್ತಲೇ ಪ್ರಸನ್ನ ಕುಮಾರ್ ಅವರು ನ್ಯಾಯಾಧೀಶರಿಗೆ ವೈದ್ಯರ ವರದಿಯನ್ನು ಓದಿ ವಿವರಿಸಿದರು.
ಪ್ರಕರಣವೊಂದನ್ನು ಉಲ್ಲೇಖಿಸಿದ ಪ್ರಸನ್ನ ಕುಮಾರ್ ಅವರು ಬೆಂಗಳೂರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ. ಆರೋಗ್ಯ ಕಾರಣ ಹೇಳಿಕೊಂಡು ನಟ ದರ್ಶನ್‌ಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿಕೊಂಡರು.
Laxmi News 24×7