ವಿಜಯಪುರದಲ್ಲಿ ಸರಣಿ ಕಳ್ಳತನ: ನಗನಾಣ್ಯ ದೋಚಿ ಪರಾರಿ
ನಿನ್ನೆ ತಡರಾತ್ರಿ ವಿಜಯಪುರದಲ್ಲಿ 5 ಮನೆಗಳಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ವಿಜಯಪುರ ನಗರದ ಅಕ್ಕಮಹಾದೇವಿ ಶಾಲೆಯ ಬಳಿ ಜಮಖಂಡಿ ರಸ್ತೆಯಲ್ಲಿರುವ 5 ಮನೆಗಳಲ್ಲಿ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಎರಡು ಮನೆಗಳಿಂದ 3 ತೊಲ ಚಿನ್ನ, ಬೆಳ್ಳಿ ಮತ್ತು ೬೫೦೦೦ ನಗದು ಹಣದೊಂದಿಗೆ ಕಳ್ಳರು ಪರಾರಿಯಾಗಿರುವುದಾಗಿ ತಿಳಿಸಿದರು.. ಇಲ್ಲಿನ ಮನೆಗಳ ಸುತ್ತ ಲೈಟ್‌ಗಳಿಲ್ಲದ ಕಾರಣ ಹಲವೆಡೆ ಕಳ್ಳರು ಸುಲಭವಾಗಿ ಪರಾರಿಯಾಗುತ್ತಿದ್ದು, ಕಳ್ಳತನದ ಪ್ರಕರಣ ಇಲ್ಲಿ ಸಾಮಾನ್ಯವಾಗುತ್ತಿವೆ. ಘಟನೆ ನಡೆದಾಗ ಮನೆಯಲ್ಲಿದ್ದವರೆಲ್ಲ ಹೊರಗೆ ಹೋಗಿದ್ದರು ಎಂದು ತಿಳಿಸಿದರು..