Breaking News

ಮೂರು ತಿಂಗಳಲ್ಲಿ 41 ಶಿಶುಗಳು ಸಾವು:

Spread the love

ಮೂರು ತಿಂಗಳಲ್ಲಿ 41 ಶಿಶುಗಳು ಸಾವು:

ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆ-ಬಿಮ್ಸ್ ನ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಮೂರು ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬರೋಬ್ಬರಿ 41 ಶಿಸುಗಳು ಸಾವನ್ನಪ್ಪಿದ್ದು, ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ.

41 ಶಿಶುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಬಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿಯಾಗಲಿ, ವೈದ್ಯರುಗಳಾಗಲಿ ತಲೆಕೆಡಿಸಿಕೊಂಡಿಲ್ಲ.

ನವಜಾತ ಶಿಶುಗಳ ಸಾವಿಗೆ ಶಿಶುಗಳ ತೂಕದಲ್ಲಿ ಕಡೆ, ಅವಧಿಪೂರ್ವ ಪ್ರಸವ ಹೀಗೆ ಬೇರೆ ಬೇರೆ ಕಾರಣಗಳನ್ನು ನೀಡಿ ಸಮಾಜಿಯಿಷಿ ಕೊಡುತ್ತಿದ್ದಾರೆ.

ಬಿಮ್ಸ್ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಿಸುಮಾರು 800ವರೆಗೂ ಹೆರಿಗೆ ಆಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ 41 ಶಿಶುಗಳು ಸಾವನ್ನಪ್ಪಿವೆ. ಮಕ್ಕಳ ಸಾವಿನ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಯೇ ಒಪ್ಪಿಕೊಂಡಿದ್ದು ಜನರನ್ನು ಕಂಗಾಲಾಗಿಸಿದೆ.

ಆಸ್ಪತ್ರೆಯಲ್ಲಿನ ಏರ್ ಕಂಪ್ರೆಸರ್ ಕೆಟ್ಟು ಹೋಗಿರುವ ಪರಿಣಾಮ ಅತಿ ಹೆಚ್ಚು ಶಿಶುಗಳು ಸಾವನ್ನಪ್ಪಲು ಕಾರಣವಾಗಿದೆ. ಆಸ್ಪತ್ರೆಯಲ್ಲಿ ಎರಡು ಏರ್ ಕಂಪ್ರೆಸರ್ ಇದ್ದು ಅದರಲ್ಲಿ ಒಂದು ಏರ್ ಕಂಪ್ರೆಸರ್ ಮೂರು ತಿಂಗಳ ಹಿಂದೆಯೇ ಕೆಟ್ಟು ಹೋಗಿದೆ. ಅದನ್ನು ಈವರೆಗೂ ಸರಿಪಡಿಸಿಲ್ಲ. ಇದರಿಂದಾಗಿ ಆಕ್ಸಿಜನ್ ಸರಿಯಾಗಿ ಸಿಗದೇ ಆಸ್ಪತೆಯಲ್ಲಿ ಕಂದಮ್ಮಗಳ ಸಾವಿನ ಸಂಖ್ಯೆ ಹೆಚ್ಚಿದೆ.

ಈ ಬಗ್ಗೆ ಬಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ಅಶೋಕ್ ಶೆಟ್ಟಿ ಹೇಲುವ ಪ್ರಕಾರ ಆಸ್ಪತ್ರೆಯಲ್ಲಿ ಶಿಶುಗಳು ಸಾವನ್ನಪ್ಪಿರುವುದು ನಿಜ. ಏರ್ ಕಂಪ್ರೆಸರ್ ಪದೇ ಪದೇ ಹಾಳಾಗುತ್ತಿತ್ತು. ಹಾಗಾಗಿ ಬೇರೆ ಮಷಿನ್ ತೆಗೆದುಕೊಳ್ಳಲು ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದಿದ್ದಾರೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ