ಪಣಜಿ:ಗೋವಾದ ಬಿಚೋಲಿ ತಾಲೂಕಿನ ಮಯೆಮ್ ನ ಹಳದಣವಾಡಿಯ 65 ವರ್ಷದ ಸುಧಾ ಚಂದ್ರಕಾಂತ ಚೋಡಣಕರ್ ಈ ವಯೋವೃದ್ಧ ಮಹಿಳೆ ಬಿಚೋಲಿ ಮಾರುಕಟ್ಟೆಯಲ್ಲಿ ಗುರುವಾರ (ಅ.24) ಇದ್ದಕ್ಕಿದ್ದತೆಯೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಈಕೆ ಹೃದಯಾಘಾತದಿಂದ ಸಾವನ್ನಪ್ಪಿರುವುದೆಂದು ಬಹುತೇಕ ಖಚಿತವಾಗಿದೆ.
ಪಂಡರಪುರಕ್ಕೆ ತೆರಳಿ ವಿಠುರಾಯನ ದರ್ಶನ ಯಾತ್ರೆಗೆ ತೆರಳುವ ಸಿದ್ಧತೆಯಲ್ಲಿದ್ದ ವಯೋವೃದ್ದೆಯ ಕನಸು ಕೊನೆಗೂ ನನಸಾಗಲೇ ಇಲ್ಲ.
ಸುಧಾ ಚೋಡಣಕರ್ ಈಕೆಯ ಪಾರ್ಥಿವ ಶರೀರವನ್ನು ಗುರುವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಈ ಮಹಿಳೆಯು ಗುರುವಾರ ರಾತ್ರಿ ಇತರ ಭಕ್ತಾದಿಗಳೊಂದಿಗೆ ಪಂಡರಪುರ ಯಾತ್ರೆಗೆ ತೆರಳುವವಳಿದ್ದಳು. ಯಾತ್ರೆಗೆ ಅಗತ್ಯವಿರುವ ವಸ್ತುಗಳ ಖರೀದಿಗಾಗಿ ಈ ಬಿಚೋಲಿಯ ಮಾರುಕಟ್ಟೆಗೆ ಬಂದಿದ್ದಳು. ಆದರೆ ದುರಾದೃಷ್ಟವಶಾತ್ ಈಕೆಯ ಪಂಡರಪುರ ಯಾತ್ರೆಗೆ ತೆರಳುವ ಕನಸು ನನಸಾಗಲೇ ಇಲ್ಲ, ಯಾತ್ರೆಗೆ ತೆರಳುವ ದಿನದಂದೇ ಈಕೆ ಕೊನೆಯುಸಿರೆಳೆದಿದ್ದಾಳೆ.
Laxmi News 24×7