ರಾಷ್ಟ್ರ ಮಟ್ಟದ ಟೆನಿಸ್ ಕ್ರಿಕೆಟ್ ನಲ್ಲಿ ಕಂಚಿನ ಪದಕ ಪಡೆದ ಆಶಾ ಮಂಗೋಜಿ
ಅಂಕಲಗಿ. ೨೧- ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಢಾಲಪುರ ನಲ್ಲಿ ಇತ್ತೀಚೆಗೆ ಜರುಗಿದ ಪ್ರಥಮ ಮಹಿಳಾ ರಾಷ್ಟ್ರೀಯ ಟಿ- ೧೦ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಪ್ರತಿನಿಧಿಸಿ ಪಾಲ್ಗೊಂಡಿದ್ದ ಸಮೀಪದ ಈರನಟ್ಟಿ ಗ್ರಾಮದ ಆಶಾ ಬಸಪ್ಪಾ ಮಂಗೋಜಿ ತೃತೀಯ ಸ್ಥಾನಗಿಟ್ಟಿಸಿ, ಕಂಚಿನ ಪದಕ ಪಡೆದುಕೊಂಡು, ರಾಜ್ಯ, ಜಿಲ್ಲೆ ಸೇರಿದಂತೆ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ಇವಳ ಈ ಸಾಧನೆಗೆ ನಾಡಿನ ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕೃಷಿಕ ಕುಟುಂಬದಿಂದ ಬಂದ ಆಶಾ ಬಿ.ಎಸ್ಸಿ ಪದವಿ ಪಡೆದು, ಬೆಂಗಳೂರಿನ ಸೀನ ಸ್ಪೋರ್ಟ್ಸ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದಿದ್ದು, ಟೆನಿಸ್ ಕ್ರಿಕೆಟ್ ನಲ್ಲಿ ಸತತ ಅಧ್ಯಯನ ಆಸಕ್ತಿ ಮತ್ತು ಕ್ರಿಯಾಶೀಲತ್ವ ವಹಿಸಿಕೊಂಡಿರುವ ಇವಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇರು ಸಾಧನೆ ತನ್ನದಾಗಬೇಕೆಂಬ ಮನದ ಇಂಗಿತ ವ್ಯಕ್ತಪಡಿಸಿದ್ದಾಳೆ.
ಆಶಾ ಮದವಾಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆಯಾದ ಕಮಲಾಕ್ಷಿ ಬಸಪ್ಪಾ ಮಂಗೋಜಿ ಅವರ ಸುಪುತ್ರಿಯಾಗಿದ್ದಾಳ
Laxmi News 24×7