ಹುಬ್ಬಳ್ಳಿ: ದೇಸಿ ಬೀಜ ಸಂರಕ್ಷಣೆಗೆ ಶ್ರಮಿಸುತ್ತಿರುವ ಉತ್ತರ ಕರ್ನಾಟಕ ಭಾಗದ ರೈತರ ಗುಂಪೊಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದು, ಅಕಾಡೆಮಿ ಅಥವಾ ಸಂಸ್ಥೆಗಳಿಗೆ ಜವಾಬ್ದಾರಿ ನೀಡುವ ಬದಲು ಸಮುದಾಯ ಬೀಜ ಬ್ಯಾಂಕ್ ಗಳ ಸ್ಥಾಪನೆಗೆ ರೈತರಿಗೆ ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ 2024 ರ ಬಜೆಟ್‌ನಲ್ಲಿ ಮೊದಲ ಬಾರಿಗೆ ದೇಸಿ ಬೀಜ ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಹಣ ಮೀಸಲಿಡುವ ವಾಗ್ದಾನ ಮಾಡಿತ್ತು. ಈ ಅವಕಾಶದೊಂದಿಗೆ ಸಾವಿರಾರು ಬೆಳೆಗಳ ಬೀಜಗಳನ್ನು ಸಂರಕ್ಷಿಸಲು ರೈತರು ಗಮನ ಹರಿಸಿದ್ದಾರೆ.
ಸಭೆಯಲ್ಲಿ ಸಂರಕ್ಷಣೆಗೆ ಅರ್ಹವಾದ ವಿವಿಧ ಬೆಳೆಗಳು, ಸಾಂಪ್ರದಾಯಿಕ ಕೃಷಿ ಪದ್ಧತಿಗಳು, ಜನಪ್ರಿಯಗೊಳಿಸಬೇಕಾದ ಹೊಸದಾಗಿ ಅಭಿವೃದ್ಧಿಪಡಿಸಿದ ವಿಧಾನಗಳು ಮತ್ತು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ ರೈತ ವಿಜ್ಞಾನಿಗಳ ಕುರಿತು ರೈತರು ಚರ್ಚಿಸಿದರು.
ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಕೃಷ್ಣ ಪ್ರಸಾದ್, ತಂತ್ರಜ್ಞಾನ ಮತ್ತು ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಿದ ಅನೇಕ ರೈತರನ್ನು ಉದಾಹರಣೆಯಾಗಿ ನೀಡುವ ಮೂಲಕ ಕ್ರೆಡಿಟ್ ನ್ನು ಅಕಾಡೆಮಿಗಳು ದೋಚ್ಚುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಬೀಜ ಸಂರಕ್ಷಣೆಗೆ 5 ಕೋಟಿ ಮೀಸಲಿಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ. ಸಮುದಾಯಕ್ಕೆ ಅನುಕೂಲವಾಗುವಂತೆ ರೈತರಿಗೆ ಹಣ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.