ಹುಕ್ಕೇರಿ: ತಾಲ್ಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 64ನೇ ಕಬ್ಬು ಅರೆಯುವ ಹಂಗಾಮಿನ ನಿಮಿತ್ತ ಬಾಯ್ಲರ್ ಪ್ರದೀಪನ ಸಮಾರಂಭ ಸೋಮವಾರ ಜರುಗಿತು.
ನಿಡಸೋಸಿಯ ಸಿದ್ದ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹುನ್ನೂರ ವಿಠ್ಠರಾಯ ದೇವರ ಪೂಜಾರಿ ಬಾಗಪ್ಪ ಬಿಜ್ಜು ಪೂಜೇರಿ ದಂಪತಿ ಪೂಜೆ ಸಲ್ಲಿಸಿದರು.
ಕಾರ್ಖಾನೆಯ ಚೇರಮನ್, ಶಾಸಕ ನಿಖಿಲ್ ಉಮೇಶ ಕತ್ತಿ, ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಪ್ರಭುದೇವ್ ಪಾಟೀಲ್, ಬಸವರಾಜ ಕಲ್ಲಟ್ಟಿ, ಸುರೇಶ ಬೆಲ್ಲದ, ಕಾರ್ಖಾನೆ ಎಂ.ಡಿ ಸಾತಪ್ಪ ಕರ್ಕಿನಾಯಿಕ, ಸಮನ್ವಯ ಅಧಿಕಾರಿ ಜಯಸಿಂಗ್ ಸನದಿ, ಕಚೇರಿ ಅಧೀಕ್ಷಕ ಸುಭಾಷ ನಾಶಿಪುಡಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ನಿರ್ದೇಶಕ ಬಸಗೌಡ ಮಗೆನ್ನವರ, ಮುಖಂಡರು ಇದ್ದರು.
Laxmi News 24×7