Breaking News

ಪ್ರತೀ ಕ್ಷೇತ್ರದಲ್ಲೂ 10 ಸಾವಿರ ಬೋಗಸ್ ಮತದಾರರು: MVA ಆರೋಪ

Spread the love

ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಕಾವೇರಿದ್ದು, ಆರೋಪ ಪ್ರತ್ಯಾರೋಪಗಳು ತೀವ್ರವಾಗಿದೆ. ವಿಪಕ್ಷ ಮೈತ್ರಿಕೂಟವಾದ ಮಹಾ ವಿಕಾಸ್ ಆಘಾಡಿ ಆಡಳಿತಾರೂಢ ಮಾಹಾಯುತಿ ಮೈತ್ರಿಕೂಟದ ವಿರುದ್ಧ ಗಂಭೀರ ಆರೋಪ ಮಾಡಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಾವಿರ ಬೋಗಸ್ ಮತದಾರನ್ನು ನೋಂದಣಿ ಮಾಡಲಾಗಿದೆ ಎಂದು ಚುನಾವಣ ಆಯೋಗಕ್ಕೆ ದೂರು ನೀಡಿದೆ.

 

ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮಾತನಾಡಿ “ಲಫಂಗಿ ಎಂದು ನಾವು ಕರೆಯುವ ಮಹಾಯುವತಿ(NDA) ಸಂವಿಧಾನವು ನೀಡಿರುವ ವಿಶೇಷ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಿನ್ನೆ ಚುನಾವಣ ಆಯೋಗವನ್ನು ಎಂವಿಎ ನಾಯಕರು ಭೇಟಿ ಮಾಡಿದ್ದು, . ಆಯಪ್ ತಯಾರಿಸಿ ಜನರ ಮತಗಳನ್ನು ಕಡಿಮೆ ಮಾಡಿ ಬೋಗಸ್ ಮತಗಳನ್ನು ಸೇರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಯೋಗಕ್ಕೆ ತಿಳಿಸಿದ್ದಾರೆ.ಪ್ರತಿ ಕ್ಷೇತ್ರದಲ್ಲಿ ಸುಮಾರು 10,000 ಬೋಗಸ್ ಮತಗಳು ಸೇರ್ಪಡೆಯಾಗುತ್ತಿವೆ.ಇದು ಮಹಾರಾಷ್ಟ್ರದ ಭವಿಷ್ಯದ ವಿಷಯವಾಗಿದೆ, ಈ ಷಡ್ಯಂತ್ರವನ್ನು ಮುನ್ನೆಲೆಗೆ ತರಲು ನಾವು ಕೆಲಸ ಮಾಡುತ್ತೇವೆ. ಅಗತ್ಯವಿದ್ದರೆ, ನಾವು ಚುನಾವಣ ಆಯೋಗದ ವಿರುದ್ಧ ದೊಡ್ಡ ರ್‍ಯಾಲಿಯನ್ನು ಸಹ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಎನ್‌ಸಿಪಿ-ಎಸ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಮಾತನಾಡಿ “ಇದು ಗಂಭೀರ ವಿಷಯವಾಗಿದೆ. ಬಿಜೆಪಿ ಸಮೀಕ್ಷೆ ನಡೆಸಿ ಅವರ ಮತದಾರರಲ್ಲದವರನ್ನು ಗುರುತಿಸಲು ಹೇಳಿದೆ. ಅವರು ವಿಶೇಷ ಅರ್ಜಿಯನ್ನು ತಂದು ಹೆಸರುಗಳನ್ನು ಸಂಪೂರ್ಣವಾಗಿ ಅಳಿಸಿ ಹೊಸ ಹೆಸರುಗಳನ್ನು ಸೇರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ