ವಿಜಯಪುರ: ವಿಚಿತ್ರವಾದ ಆಕಳು ಕರುವೊಂದು ಜನಿಸಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ. ಈ ಕರುವಿಗೆ ಒಂದು ಮುಖ, ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳು ಇವೆ.
ರೈತ ಮಹಿಳೆ ಸಾವಿತ್ರಿ ನಾಗೂರಿ ಎಂಬುವರ ತೋಟದ ಮನೆಯಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿದೆ.
ಈ ಕರುವಿಗೆ ಎರಡು, ನಾಲಿಗೆ, ಮೂರು ಕಣ್ಣು ಇರುವುದನ್ನು ಕಂಡು ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ. ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಹ ಆಗಮಿಸುತ್ತಿದ್ದಾರೆ.
ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ. ವಿಚಿತ್ರ ಕರುವಿನ ವಿಷಯ ತಿಳಿದು ಪಶು ವೈದ್ಯರು ಸಹ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಗ್ಯ ಪರೀಕ್ಷೆ ನಡೆಸಿರುವ ವೈದ್ಯರು, ಕರುವಿನ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.