ಬೆಂಗಳೂರು : ವಾಲ್ಮೀಕಿ ಅಭಿವೃದ್ದಿ ಹಗರಣ ಪ್ರಕರಣಕ್ಕೆ ಸಂಬಂಧಸಿದಂತೆ ಮಾಜಿ ಸಚಿವ ನಾಗೇಂದ್ರ ಜೈಲಿನಿಂದ ಹೊರಬಂದ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿದೆ ಆ ಸರ್ಕಾರವನ್ನ ಅಸ್ಥಿರ ಗೊಳಿಸುವ ಷಡ್ಯಂತ್ರ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು, ವಾಲ್ಮೀಕಿ ಹಗರಣದಲ್ಲಿ ಏನೂ ಪಾತ್ರವಿಲ್ಲದಿದ್ದರೂ ಏಕಾಏಕಿ ಬಂಧನ ಮಾಡಿ ಮೂರು ತಿಂಗಳಿಂದ ಇಡಿ ನನಗೆ ಸಾಕಷ್ಟು ಕಿರುಕುಳ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳಲು ಒತ್ತಾಯ ಮಾಡಿದ್ರು ಎಂದು ಹೇಳಿದರು.
ಕೇಂದ್ರ ಬಿಜೆಪಿ ನಾಯಕರ ಒತ್ತಡದಿಂದ ಇಡಿ ನನ್ನ ಮುಖಾಂತರ ರಾಜ್ಯ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸಿದ್ದರು. ಆದರೆ ಈ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲವೆಂದ ಮೇಲೆ ಸಿದ್ದರಾಮಯ್ಯ ಪಾತ್ರ ಎಲ್ಲಿಂದ ಎಲ್ಲಿಂದ ಬರುತ್ತೆ ಎಂದು ಹೇಳಿದೆ.
ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿಯವರು ದಪ್ಪ ಚರ್ಮದ ಹೊಟ್ಟೆ ಕರಗಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾದರೂ ವ್ಯಾಯಾಮ ಅದ ಹಾಗೆ ಆಗುತ್ತೆ ಎಂದು ಮಾಜಿ ಸಚಿವ ನಾಗೇಂದ್ರ ವ್ಯಂಗ್ಯ ಮಾಡಿದರು
ಇಡಿಯವರು ವಿನಾಕಾರಣ ಸಿದ್ದರಾಮಯ್ಯ ಹೆಸರು ತುಳುಕುಹಾಕಲು ಷಡ್ಯಂತ್ರ ಮಾಡಿದೆ. ನ್ಯಾಯಾಂಗದ ಮೇಲೆ ಕಾಂಗ್ರೇಸ್ ಗೆ ನಂಬಿಕೆ ಇದೆ ನನಗೆ ಇಂದು ಬೇಲ್ ಸಿಕ್ಕಿದೆ. ಒಂದಂತು ಸತ್ಯ ಯಾವುದೇ ಕಾರಣಕ್ಕೂ ಹಣ ದುರ್ಬಳಕೆ ಆಗಿಲ್ಲ. ಬಿಜೆಪಿಯನ್ನ ಕರ್ನಾಟಕದಿಂದ ಕಿತ್ತೊಗೆಯುವ ಕೆಲಸವನ್ನ ಮಾಡ್ತೀವಿ ಎಂದು ನಾಗೇಂದ್ರ ಹೇಳಿದರು.
Laxmi News 24×7