Breaking News

ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

Spread the love

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು) ಕಾಯಿಲೆ ಕೂಡ ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿವೆ. ಸಂಧಿವಾತ ( Arthritis ) ವಯಸ್ಸಾದವರಲ್ಲಿ ಮಾತ್ರ ಕಾಣಿಸುತ್ತದೆ ಎನ್ನುವ ತಪ್ಪು ಕಲ್ಪನೆ ಬಹುತೇಕರಲ್ಲಿದೆ.

ಆದರೆ, ಈ ಸಮಸ್ಯೆ ಎಲ್ಲ ವಯೋಮಾನದವರಲ್ಲೂ ಪರಿಣಾಮ ಬೀರುತ್ತಿದ್ದು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನೂ ಕಾಡುತ್ತಿದೆ. ಇಂತಹ ಕಾಯಿಲೆ ಲಕ್ಷಣ, ಪರಿಹಾರ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಚಿಕಿತ್ಸಾ ಪದ್ಧತಿಗಳ ಕುರಿತು `ವಿಶ್ವ ಅರ್ಥರೈಟಿಸ್ ದಿನ ( World Arthritis Day )’ದ ಅಂಗವಾಗಿ ಬೆಳಗಾವಿ ಮಹಾನಗರದ `ಉಪ್ಪಿನ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಕೇಂದ್ರ’ ಡಾ.ಅರ್ಚನಾ ಎಂ.ಉಪ್ಪಿನ (ಖನಗಾವಿ) ಅವರು ಕನ್ನಡದ ನಂ-1 ದಿನಪತ್ರಿಕೆ `ವಿಜಯವಾಣಿ’ಜತೆಗೆ ಮಾತನಾಡಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಆಧುನಿಕ ಜೀವನ ಶೈಲಿ, ಅನಿಯಮಿತ ಆಹಾರ ಪದ್ಧತಿ, ಒತ್ತಡದ ಜೀವನ ಕ್ರಮಗಳಿಂದಾಗಿ ಸಂಧಿವಾತ ಸಮಸ್ಯೆಯಿಂದ ಬಳಲುವರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮಧ್ಯ ವಯಸ್ಸಿನವರು, ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸಂಧಿವಾತ ಕಾಯಿಲೆಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅಪಾಯಕಾರಿಯಾಗಿ ಕಾಡುವ ಸಾಧ್ಯತೆಗಳು ಹೆಚ್ಚು. ಅರ್ಥರೈಟಿಸ್ ಕಾಯಿಲೆ ನಿರ್ಲಕ್ಷಿಸಿದಷ್ಟು ಅಪಾಯಕಾರಿಯಾಗಿರುವುದರಿಂದ ಸಾರ್ವಜನಿಕರಲ್ಲಿ ನಿರಂತರ ಜಾಗೃತಿಯ ಅಗತ್ಯತೆ ಇದೆ ಎನ್ನುತ್ತಾರೆ ಬೆಳಗಾವಿ ಮಹಾನಗರದ `ಉಪ್ಪಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಕೇಂದ್ರ’ದ ಡಾ.ಅರ್ಚನಾ ಎಂ. ಉಪ್ಪಿನ (ಖನಗಾವಿ).

ಸಂಧಿವಾತ ( Arthritis ) ವಿಧಗಳು: ಅಸ್ಥಿಸಂಧಿವಾತ, ರುಮಟಾಯ್ಡ್ ಸಂಧಿವಾತ ಮತ್ತು ಸೋರಿಯಾಟಿಕ ಸಂಧಿವಾತದ ಸೇರಿದಂತೆ ನೂರಕ್ಕು ಹೆಚ್ಚು ವಿಧಗಳಿವೆ. ಇವು ದೇಹದಲ್ಲಿ ನಾನಾ ರೀತಿಯ ಪರಿಣಾಮ ಉಂಟು ಮಾಡುತ್ತವೆ. ಸಂಧಿವಾತವು ಸ್ವಯಂ ನಿರೋಧಕ ಕಾಯಿಲೆ, ಮಂಡಿ ನೋವ್ವು ಆಸ್ತಿಸಂಧಿವಾತದ ರೋಗಿಗಳಲ್ಲಿ ಮೊಣಕಾಲು ನೋವು ಸಾಮಾನ್ಯ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವಷ್ಟು ತೀವ್ರವಾಗಿರುತ್ತದೆ. ಸಂಧಿಯ ಕಾರ್ಟಿಲೆಜ್ ದುರ್ಬಲವಾಗುವುದನ್ನು ಅಸ್ಥಿ ಸಂಧಿವಾತ ಎನ್ನಲಾಗುತ್ತದೆ ಇದು ಸಾಮಾನ್ಯವಾಗಿ ವಯಸ್ಸು ಆದವರಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಮೊಣಕಾಲು, ಸೊಂಟ, ಕೈ ಮತ್ತು ಬೆನ್ನಿನ ಕೀಲುಗಳಲ್ಲಿ ಕಾಣಿಸುತ್ತದೆ. ಈ ಲಕ್ಷಣಗಳು ಕಂಡುಬಂದಲ್ಲಿ ರೊಮೊಟಾಲೋಜಿಸ್ಟ್ ವೈದ್ಯರನ್ನು ಸಂಪರ್ಕಿಸಿ.

ರೋಗ ಲಕ್ಷಣಗಳು: ಸಂಧಿವಾತ ಕಾಯಿಲೆಯಿಂದ ಬಳಲುವವರಲ್ಲಿ ನೋವು ತೀವ್ರತರವಾಗಿರುತ್ತದೆ. ಮೊಣಕೈ ಅಥವಾ ಬೆರಳಿನ ಕೀಲುಗಳನ್ನು ಮಡಚಿ ಮತ್ತು ತೆರೆಯುವಾಗ ಅನುಭವಿಸುವ ನೋವು ಸಹನೆ ಕಷ್ಟಕರವಾಗಿರುತ್ತದೆ. ಇದರಿಂದ ದಿನನಿತ್ಯದ ಕೆಲಸ-ಕಾರ್ಯ ಮಾಡಲೂ ಕಷ್ಟವಾಗುತ್ತದೆ. ಕೆಲವು ವಿಧದ ಸಂಧಿವಾತದಲ್ಲಿ (ಉರಿಯೂತ) ಕೀಲುಗಳ ಚರ್ಮ ಕೆಂಪಾಗುವುದನ್ನು ಕಾಣಬಹುದಾಗಿದೆ. ಸಂಧಿವಾತ ಹೆಚ್ಚಾದಂತೆ, ದೇಹ ಸ್ವಾಭಾವಿಕವಾಗಿ ನಿಷ್ಕಿöçಯಗೊಳ್ಳುತ್ತ ಸಾಗುತ್ತದೆ. ಶಕ್ತಿಯ ಕೊರತೆ ಜತೆಗೆ ಚಲನೆಯ ಸಾಮರ್ಥ್ಯ, ವ್ಯಾಪ್ತಿಯನ್ನೂ ಕಡಿಮೆಗೊಳಿಸುತ್ತ ಸಾಗುತ್ತದೆ. ಕ್ರಮೇಣ ಜ್ವರ ಬಾಧಿಸಲಾರಂಭಿಸುತ್ತದೆ. ಜ್ವರ ಸಂಧಿವಾತದ ಮುಂದುವರೆದ ಲಕ್ಷಣವಾಗಿದೆ.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ