ಭಟ್ಕಳ: ಬೆಂಗಳೂರು ಮೂಲದ ವಿದ್ಯಾರ್ಥಿ ಭಾನುವಾರ ಮುರುಡೇಶ್ವರದ ಕಡಲಿನಲ್ಲಿ ಈಜಲು ತೆರಳಿ ಮೃತಪಟ್ಟ ಹಿನ್ನೆಲೆಯಲಿ ಭಟ್ಕಳ ಉಪವಿಭಾಗಾಧಿಕಾರಿ ಆದೇಶದಂತೆ ಸೋಮವಾರದಿಂದ ಪ್ರವಾಸಿಗರಿಗೆ ಮುರುಡೇಶ್ವರ ಬೀಚ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅಕ್ಟೋಬರ್ ರಜೆ ಕಳೆಯಲು ಬರುವ ಪ್ರವಾಸಿಗರು ಬೀಚ್‌ಗೆ ತೆರಳದಂತಾಗಿದೆ.

ಸಾಲು ಸಾಲು ರಜೆಯ ಸಂದರ್ಭದಲ್ಲಿ ಮುರುಡೇಶ್ವರಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರ ಸುರಕ್ಷತೆಗಾಗಿ ಪ್ರವಾಸೋದ್ಯಮ ಇಲಾಖೆಯೂ ಅಗತ್ಯ ಜೀವ ರಕ್ಷಕ ಸಿಬ್ಬಂದಿ ಹಾಗೂ ಸಾಧನ ಪೂರೈಸುವ ತನಕ ಬೀಚ್ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಜಿಲ್ಲಾಧಿಕಾರಿಯ ಮೌಖಿಕ ಆದೇಶ ಉಲ್ಲೇಖಿಸಿ, ಭಟ್ಕಳ ಉಪವಿಭಾಗಾಧಿಕಾರಿ ನಯನಾ ಅವರು ಭಟ್ಕಳ ಡಿವೈಎಸ್ಪಿಗೆ ಸೋಮವಾರ ಪತ್ರ ಬರೆದು ಬೀಚ್ ಪ್ರವೇಶಕ್ಕೆ ನಿರ್ಭಂದ ವಿಧಿಸುವಂತೆ ಸೂಚಿಸಿದ್ದಾರೆ.
Laxmi News 24×7