ಬೆಳಗಾವಿ: ನಗರದಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ತೀರ್ಮಾನವನ್ನು ಇಲ್ಲಿ ಮಂಗಳವಾರ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳಲಾಯಿತು.
‘ಈ ಬಾರಿ ದೀಪಾವಳಿ ಹಬ್ಬವೂ ನ.1ರಂದೇ ಇದೆ. ಅಂದು ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಿ, ನ.3ರಂದು ಮೆರವಣಿಗೆ ಆಯೋಜಿಸಬೇಕು’ ಎಂದು ಯುವಕ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ರಮೇಶ ಸೊಂಟಕ್ಕಿ ಮತ್ತಿತರರು, ‘ಯಾವ ಕಾರಣಕ್ಕೂ ರಾಜ್ಯೋತ್ಸವದ ಮೆರವಣಿಗೆ ದಿನಾಂಕ ಮುಂದೂಡುವಂತಿಲ್ಲ. ಬೇಕಿದ್ದರೆ ಮೆರವಣಿಗೆ ಸಮಯ ವಿಸ್ತರಿಸಿ’ ಎಂದರು. ಈ ವಿಚಾರವಾಗಿ ಸಮಗ್ರವಾಗಿ ಚರ್ಚಿಸಿದ ನಂತರ, ನ.1ರಂದೇ ರಾಜ್ಯೋತ್ಸವದ ಭವ್ಯ ಮೆರವಣಿಗೆಯನ್ನೂ ನಡೆಸುವ ನಿರ್ಧಾರವನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಕಟಿಸಿದರು.
Laxmi News 24×7