ಗುಪ್ತಚರ ಏಜೆನ್ಸಿಗಳು ವಿಫಲವಾಗಿವೆ: ಗೃಹ ಸಚಿವ
ಹುಬ್ಬಳ್ಳಿ: ‘ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಪಾಕಿಸ್ತಾನದವರು ಸುಲಭವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ರಾಜ್ಯ ಪೊಲೀಸರಿಗೆ ಮಾಹಿತಿ ದೊರೆತ ತಕ್ಷಣ ಕೆಲವರನ್ನು ಬಂಧಿಸಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಬಳಿ ರಾ (ಆರ್‌ಎಡಬ್ಲು), ಕೇಂದ್ರ ಗುಪ್ತಚರ, ಸಿಬಿಐ ಅಂಥ ಏಜೆನ್ಸಿಗಳು ಇದ್ದಾಗಲೂ ರಾಜ್ಯಕ್ಕೆ ನುಸುಳುಕೋರರು ಬಂದು ಪಾಸ್‌ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದರೆ ಏಜೆನ್ಸಿಗಳು ವಿಫಲವಾಗಿವೆ ಎಂದರ್ಥ.
ರಾಜ್ಯದ ಇತರೆಡೆಯೂ ಅವರು ವಾಸವಾಗಿದ್ದಾರೆ ಎನ್ನುವ ಮಾಹಿತಿಯಿದ್ದು, ಅವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ’ ಎಂದರು.