Breaking News

ಗಾಂಜಾ ಗುಂಗಲ್ಲಿದ್ದವರ ನಶೆ ಇಳಿಸಿದ ಹುಬ್ಬಳ್ಳಿ ಪೊಲೀಸರು ​

Spread the love

ಹುಬ್ಬಳ್ಳಿ-ಧಾರವಾಡ ಪೊಲೀಸರು ಗಾಂಜಾ ಮಾರಾಟ ಮತ್ತು ವ್ಯಸನಿಗಳ ವಿರುದ್ಧ ಸಮರ ಸಾರಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸರು 518 ಗಾಂಜಾ ವ್ಯಸನಿಗಳನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆ ನಡೆಸಿದರು. 34 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.ಹುಬ್ಬಳ್ಳಿ, ಸೆಪ್ಟೆಂಬರ್​ 29: ಹುಬ್ಬಳ್ಳಿ-ಧಾರವಾಡ ಪೊಲೀಸರು ( Hubballi-Dharwad Police) ಗಾಂಜಾ ( Ganja ) ಮಾರಾಟ ಮತ್ತು ವ್ಯಸನಿಗಳ ವಿರುದ್ಧ ಸಮರ ಸಾರಿದ್ದಾರೆ.

ಇತ್ತೀಚಿಗೆ ಅವಳಿನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತ ಪೊಲೀಸರು ಮೇಲಿಂದ ಮೇಲೆ ಕಾರ್ಯಾಚರಣೆ ನಡೆಸಿ, ಪೆಡ್ಲರ್​ಗಳು​ ಮತ್ತು ವ್ಯಸನಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇಂದು (ಸೆ.29) ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಪೊಲೀಸರು ಒಟ್ಟು 518 ಜನರ ತಪಾಸಣೆಗೆ ಒಳಪಡಿಸಿದರು. ಅದರಲ್ಲಿ 147 ಜನ ಗಾಂಜಾ ಸೇವಿಸಿರುವುದು ದೃಢವಾಗಿದೆ. 34 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್​​ ಎನ್​ ಶಶಿಕುಮಾರ್​ ಮಾತನಾಡಿ, ಅವಳಿನಗರದಲ್ಲಿ ಡ್ರಗ್ ಅಭಿಯಾನ ನಿರಂತರವಾಗಿ ಮಾಡುತ್ತಿದ್ದೇವೆ. ಡ್ರಗ್ ಪೆಡ್ಲರ್, ವ್ಯಸನಿಗಳ ಮೇಲೆ ಮೂರು ಹಂತದಲ್ಲಿ ಕ್ರಮ ಕೈಗೊಂಡಿದ್ದೇವೆ. ಮೊದಲು ಶೇ 63.67ರಷ್ಟು ಪಾಸಿಟಿವ್ ಬಂದಿತ್ತು. ಎರಡನೇ ಹಂತದಲ್ಲಿ ಶೇ 53 ರಷ್ಟು ಹಾಗೂ ಮೂರನೇ ಹಂತದಲ್ಲಿ ಶೇ 43 ರಷ್ಟು ಮತ್ತು ಇಂದು ಶೇ 29 ರಷ್ಟು ಪಾಸಿಟಿವ್ ಇದೆ ಎಂದು ಹೇಳಿದರು.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ