Breaking News

ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ

Spread the love

ನಾಳೆಯಿಂದ ಅ.10 ರವರೆಗೆ ಹೈಕೋರ್ಟ್ ಗೆ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ

ಬೆಂಗಳೂರು : ರಾಜ್ಯ ಹೈಕೋರ್ಟ್ ಗೆ ಅ. 3 ರಿಂದ 7 ದಿನಗಳ ಕಾಲ ದಸರಾ ರಜೆ ಇರಲಿದ್ದು, ಹೈಕೋರ್ಟ್ ರಜಾಕಾಲದ ಪೀಠ ಕಾರ್ಯ ನಿರ್ವಹಿಸಲಿದೆ.

ಅಕ್ಟೋಬರ್ 11ರಂದು ಆಯುಧಪೂಜೆ, ಅ. 12ರಂದು ವಿಜಯದಶಮಿ, ಎರಡನೇ ಶನಿವಾರ, ಅ. 13 ಭಾನುವಾರ ರಜೆ ಇರುವುದರಿಂದ ಅಕ್ಟೋಬರ್ 14 ರಿಂದ ಕೋರ್ಟ್ ಕಲಾಪಗಳು ಪುನರಾರಂಭ ಆಗಲಿವೆ.

ಬೆಂಗಳೂರಿನ ಹೈಕೋರ್ಟ್ ಪ್ರಧಾನಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ದಸರಾ ರಜೆ ಅನ್ವಯವಾಗಲಿದೆ.

ಅಕ್ಟೋಬರ್ 4 ಮತ್ತು 9 ರಂದು ತುರ್ತು ಪ್ರಕರಣಗಳ ವಿಚಾರಣೆಗೆ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳಲ್ಲಿ ತಲಾ ಒಂದು ವಿಭಾಗೀಯ ನ್ಯಾಯಪೀಠ ಹಾಗೂ ಎರಡು ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.


Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ