Breaking News

ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಲು ಒತ್ತಾಯ…!!

Spread the love

ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಲು ಒತ್ತಾಯ…!!

ಇವತ್ತು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ಇವರನ್ನು ಭೇಟಿ ಮಾಡಿದ ನೀಲಜಿ, ಶಿಂದೋಳ್ಳಿ ಗ್ರಾಮದ ಹಿರಿಯರು, ಇಲ್ಲಿಯ ರಹವಾಸಿಯಾದ ಶ್ರೀಮತಿ ಭಾರತಿ ಕಾನಪ್ಪ ಪೂಜಾರಿ ಎಂಬ ಮಹಿಳೆ 4 ದಿನಗಳ ಹಿಂದೆ ಗ್ರಾಮದ ಶ್ರೀ ಮಸಣವ್ವ ದೇವಸ್ಥಾನದಲ್ಲಿ ಕಳ್ಳರು ಕಳತನದಲ್ಲಿ ತೊಡಗಿದ್ದಾಗ ಮಹಿಳೆ ನೋಡಿದ್ದಾಳೆ

ಎಂಬ ಕಾರಣಕ್ಕೆ ಕಳ್ಳರು ಮಹಿಳೆಯನ್ನು ಬಾವಿಗೆ ನೂಕಿ ಕೊಲೆ ಮಾಡಿರುವ ಶಂಕೆ ಇದ್ದು.ಈ ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸಿಕೊಂಡು ಮತ್ತು ವಿಶೇಷ ಪ್ರಕರಣ ಎಂದು ಪರಿಗಣಿಸಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಅವರಿಗೆ ಅತಿ ಕಠಿಣವಾದ ಶಿಕ್ಷೆ ವಿಧಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಶಹಾಪೂರಕರ,ಸದಸ್ಯರಾದ ಬಾಬಾಗೌಡ ಪಾಟೀಲ್,ಪಿರಾಜಿ ಅನಗೋಳಕರ,ಮಿಲನ ಮಾತಾರಿ,ರೇಖಾ ಶಹಾಪೂರಕರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ