Breaking News

ಕಾರಂತರ ನೆನಪು

Spread the love

ನ್ನಡ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಭಾಷೆ. ನಮ್ಮ ಈ ಕರುನಾಡಿನಲ್ಲಿ ಅದೆಷ್ಟೋ ಸಾಹಿತಿಗಳು ಕನ್ನಡ ಭಾಷೆಯ ಕಂಪು, ಅದರ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಲುವಲ್ಲಿ ಶ್ರಮಿಸಿದ್ದಾರೆ. ಅಂಥವರ ಸಾಲಿನಲ್ಲಿ ಬರುವ ಮಹಾನ್‌ ಸಾಹಿತಿಗಳಲ್ಲಿ ಒಬ್ಬರು ಕೋಟ ಶಿವರಾಮ ಕಾತಂತರು.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಥೆ, ಸಣ್ಣಕಥೆ, ಹರಟೆ, ವ್ಯಂಗ್ಯ, ಕವನ, ಕಾದಂಬರಿ, ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಪರಿಸರ ವಿಜ್ಞಾನ, ಜೀವನಚರಿತ್ರೆ, ಕಲೆ, ಯಕ್ಷಗಾನ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿ ನಡೆದಾಡುವ ವಿಶ್ವಕೋಶ ಎಂದೇ ಅವರು ಖ್ಯಾತರಾಗಿದ್ದಾರೆ.

ಕಡಲ ತೀರದ ಭಾರ್ಗವನ ಸಾಹಿತ್ಯದ ಸಾಧನೆಯನ್ನು ಅಜರಾಮರವಾಗಿರುವಂತೆ ಮಾಡಲು ಅವರ ಹುಟ್ಟೂರಾದ ಉಡುಪಿಯ ಕೋಟದ ಕೋಳ್ಕೆರೆಯಲ್ಲಿ ಕೋಟ ಶಿವರಾಮ ಕಾರಂತ ಥೀಮ್‌ ಪಾರ್ಕ್‌ ಅನ್ನು 2011ರಲ್ಲಿ ನಿರ್ಮಿಸಲಾಗಿದೆ. ಇದುಕೋಟ ಮುಖ್ಯರಸ್ತೆಯಿಂದ 300ಮೀ. ದೂರದಲ್ಲಿದ್ದು, ಇಲ್ಲಿ ವಾರದ 7 ದಿನವೂ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಭೇಟಿಗೆ ಅವಕಾಶವಿದೆ.

ಈ ಥೀಮ್‌ ಪಾರ್ಕ್‌ ಒಂದು ಉದ್ಯಾನವನವನ್ನು ಹೊಂದಿದ್ದು, ಅದರ ಮಧ್ಯದಲ್ಲಿ ಶಿವರಾಮ ಕಾರಂತರ ಕಂಚಿನ ಪ್ರತಿಮೆಯನ್ನು ಒಳಗೊಂಡಿರುವ ಒಂದು ಸಣ್ಣ ಕೊಳವಿದೆ. ಅವರ ಕಾದಂಬರಿಗಳಲ್ಲಿ ಬರುವ ಕೆಲವು ಸಾಂಪ್ರದಾಯಿಕ ಪಾತ್ರಗಳನ್ನು ಪ್ರತಿನಿಧಿಸುವ ಶಿಲ್ಪಗಳನ್ನು ಈ ಉದ್ಯಾನವನದಲ್ಲಿ ಇರಿಸಲಾಗಿದ್ದು, ಈ ಪೈಕಿ ಪ್ರಮುಖವಾಗಿ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ rಅವರ ಮೂಕಜ್ಜಿಯ ಕನಸುಗಳು ಕಾದಂಬರಿಯ ಪ್ರಮುಖ ಪಾತ್ರವಾದ ಮೂಕಜ್ಜಿಯ ಪ್ರತಿಮೆ ಹಾಗೂ ಅವರ ಚೋಮನ ದುಡಿ ಕಾದಂಬರಿಯ ಪ್ರಮುಖ ಪಾತ್ರವಾದ ಚೋಮನು ಡ್ರಮ್‌ ಬಾರಿಸುವ ಪ್ರತಿಮೆಗಳನ್ನು ಇಲ್ಲಿ ಕಾಣಬಹುದು. ಉದ್ಯಾನವನದ ಇನ್ನೊಂದು ಭಾಗದಲ್ಲಿ ಕಾರಂತರನ್ನು ತನ್ನ ಎತ್ತಿನಗಾಡಿಯಲ್ಲಿ ಕರೆದುಕೊಂದು ಹೋಗುತಿದ್ದ ಕೂಸಣ್ಣ ಮತ್ತು ಅವನ ಎತ್ತಿನಗಾಡಿಯ ಪ್ರತಿಮೆಯಿದೆ.

ಈ ಪಾರ್ಕ್‌ನ ಇನ್ನೊಂದು ಆಕರ್ಷಣೆಯೆಂದರೆ ಉಯ್ನಾಲೆಯ ಮೇಲೆ ಕುಳಿತಿರುವ ರಾಧಾ-ಕೃಷ್ಣರ ಅವಳಿ ಶಿಲ್ಪಗಳು. ಶಿವರಾಮ ಕಾರಂತರು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವನ್ನು ಪಾರ್ಕ್‌ ನಲ್ಲಿ ಇರಿಸಲಾಗಿದೆ. ಇಲ್ಲಿ ಕನ್ನಡದ ಎಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕತರ ಪ್ರತಿಮೆಗಳಿದ್ದು, ಶಿವರಾಮಕಾರಂತರ ಅಪರೂಪದ ಛಾಯಾಚಿತ್ರಗಳನ್ನೂ ಕಾಣಬಹುದು.


Spread the love

About Laxminews 24x7

Check Also

ಸವದಿ ಬಿಜೆಪಿಯಲ್ಲಿದ್ದರೆ ದೊಡ್ಡ ಲೀಡರ್ ಆಗುತ್ತಿದ್ದ, ಆದರೀಗ ನಮ್ಮ ಪೀಡಾ ಹೋಗಿದೆ: ರಮೇಶ್ ಜಾರಕಿಹೊಳಿ

Spread the loveಸವದಿ ಬಿಜೆಪಿಯಲ್ಲಿದ್ದರೆ ದೊಡ್ಡ ಲೀಡರ್ ಆಗುತ್ತಿದ್ದ, ಆದರೀಗ ನಮ್ಮ ಪೀಡಾ ಹೋಗಿದೆ: ರಮೇಶ್ ಜಾರಕಿಹೊಳಿ ಚಿಕ್ಕೋಡಿ, ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ