ಗೋಕಾಕ ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ ಪ್ರಕರಣ: 14 ಆರೋಪಿಗಳ ಆಸ್ತಿ ಜಪ್ತಿ : ಎಸ್ ಪಿ ಗುಳೇದ್
ಬೆಳಗಾವಿ: ಮಹಾಲಕ್ಷ್ಮೀ ಕೋ ಆಪ್ ರೇಟಿವ್ ಬ್ಯಾಂಕ್ ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ 14 ಜನರ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್
ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ತಿಳಿಸಿದ ಅವರು, ಗೋಕಾಕ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ 74.86 ಕೋಟಿ ಅವ್ಯವಹಾರ ನಡೆದಿರುವ ಕುರಿತು ಕಳೆದ ಒಂದು ವಾರದ ಹಿಂದೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕಣದಲ್ಲಿ ಒಟ್ಟು 14 ಜನರ ಭಾಗಿಯಾಗಿದ್ದು, 5 ಆರೋಪಿಗಳು ಈ ಬ್ಯಾಂಕಿನಲ್ಲೇ ಕಾರ್ಯನಿರ್ವಹಿಸುವ ಸಿಬ್ಬಂದಿಗಳಾಗಿದ್ದಾರೆ. ಅದರಲ್ಲಿ ಸಾಗರ ಹನಮಂತ ಸಬಕಾಳೆ ಎಂಬುವರೇ ಮುಖ್ಯಆರೋಪಿಯಾಗಿದ್ದಾನೆ. ಬ್ಯಾಂಕ್ ಅವ್ಯಹಾರದಲ್ಲಿ ಸಾಗರ ಎಂ ಆರೋಪಿಯಾಗಿದ್ದು, ಇತನ ಆಸ್ತಿ ಮೌಲ್ಯ 6.ಕೋಟಿ 97 ಲಕ್ಷ ಠೇವಣಿ ಇಟ್ಟು ಬೇರೆ ಬೇರೆಯವರ ಹೆಸರಿನಲ್ಲಿ 81 ಕೋಟಿ ರೂ. ಲೋನ್ ಪಡೆದಿರುತ್ತಾರೆ ಎಂದು ತಿಳಿಸಿದರು.
ಬ್ಯಾಂಕಿನ ವಹಿವಾಟು ನಾಲ್ಕು ಬಾರಿ ಅಡಿಟ್ ಆಗಿದೆ. ಆದರೂ ಈ ಒಂದು ಅಂಶ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆಗೆ ನಮ್ಮ ಪೊಲೀಸರು 112 ಆಸ್ತಿಗಳನ್ನು ಜಪ್ತಿ ಮಾಡಿ ಮಾಡಿದ್ದಾರೆ. ಇದರ ಸರಕಾರಿ ಮೌಲ್ಯ 13.ಕೋಟಿ 17 ಲಕ್ಷ ಇದೆ. ಮಾರ್ಕೆಟ್ ಮೌಲ್ಯ 50 ಕೋಟಿ ರೂ.ಇದೆ ಎಂದ ಅವರು, 11 ಆರೋಪಿಗಳು ಈ
ಬ್ಯಾಂಕಿನಲ್ಲಿ ಆರು ಕೋಟಿ ಎಪ್‌ಡಿ ಇಟ್ಟು ಬೇರೆ ಬೇರೆ ಅವರ ಹೆಸರಿನಲ್ಲಿ 2021ರಿಂದ 2024ರ ಅವಧಿಯಲ್ಲಿ ಬ್ಯಾಂಕ್ ನಲ್ಲಿ 81 ಕೋಟಿ ಸಾಲ ಪಡೆದಿದ್ದಾರೆ ಎಂದರು.