ಚಿಕ್ಕಮಗಳೂರು : ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆ ಕೂಡ ಬರಬೇಕು ಎಂದು ಆದೇಶ ನೀಡಿದ ಇಲಾಖೆಯ ನಿರ್ಧಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಬಿಜೆಪಿ ಕಿಡಿ ಕಾರಿದೆ.
ಮೂಡಿಗೆರೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೇಮಕಾತಿ ಆದೇಶ ಹೊರಡಿಸಿದ್ದು ಈ ಆದೇಶದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಿಜೆಪಿ ಕಿಡಿ ಕಾರಿದ್ದು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಅಲ್ಪಸಂಖ್ಯಾತರನ್ನೇ ನೇಮಕ ಮಾಡಲು ಉರ್ದು ಭಾಷೆಗೆ ಆದ್ಯತೆಯ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇಲಾಖೆ ಕನ್ನಡ ಭಾಷೆಗೆ ಅನ್ಯಾಯ ಎಸಗಿದೆ ಕೂಡಲೇ ಸಂಬಂಧ ಪಟ್ಟ ಇಲಾಖೆ ಈ ಆದೇಶವನ್ನು ಹಿಂದೆ ಪಡೆಯಬೇಕು ಇಲ್ಲದಿದ್ದಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದೆ.