Breaking News

ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ

Spread the love

ಕಾರವಾರ: ತಾಲೂಕಿನ ಹಣಕೋಣ ಗ್ರಾಮದಲ್ಲಿ ರವಿವಾರ ಸೆ.22) ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ದಂಪತಿಯ ಮೇಲೆ ಹಲ್ಲೆ ಮಾಡಿದ್ದಾರೆ.

ಪುಣೆಯಲ್ಲಿ ಕೈಗಾರಿಕೆ ಸ್ಥಾಪಿಸಿರುವ ಉದ್ಯಮಿ ವಿನಾಯಕ ನಾಯ್ಕ (56) ಮನೆಯ ಕೋಣೆಯೊಂದರಲ್ಲಿ ಹತ್ಯೆಯಾಗಿದ್ದಾರೆ.

ಅವರ ಪತ್ನಿ ವೈಶಾಲಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ವಿನಾಯಕ ನಾಯ್ಕ ಹಾಗೂ ವೈಶಾಲಿ ದಂಪತಿ ಹಣಕೋಣ ಮೂಲದವರಾಗಿದ್ದು, ಪುಣೆ ನಗರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಪುಣೆಯಿಂದ ಸಾತೇರಿ ದೇವಿ ಜಾತ್ರೆಗೆ ಬಂದಿದ್ದ ಇವರು ಹಣಕೋಣದಲ್ಲಿನ ಮನೆಯಲ್ಲಿ ವಾಸವಾಗಿದ್ದರು.

ಇದು ವೈಷಮ್ಯದ ಕೊಲೆಯೋ ಅಥವಾ ದರೋಡೆಯೋ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.‌

ಚಿತ್ತಾಕುಲಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಕೊಲೆಯಾದ ಸ್ಥಳ ತಲುಪಿದ್ದಾರೆ.


Spread the love

About Laxminews 24x7

Check Also

ಪಟಾಕಿ ತಾಗಿದ್ದಕ್ಕೆ ಸಿಡಿಮಿಡಿ; ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ

Spread the loveಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ