ಗದಗ: ಬಸವ ತತ್ವ ಒಪ್ಪದ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಲಿಂಗಾಯತರಲ್ಲಿಯೇ ಒಡಕು ಮೂಡಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ವಚನ ದರ್ಶನ ಕೃತಿ ಒಂದು ನಿದರ್ಶನ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಎಂ. ಜಾಮದಾರ ಆರೋಪಿಸಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತರಿಂದ ಬರೆಸಿ, ಸಂಪಾದಿಸಿದ ಪುಸ್ತಕವನ್ನು ಆರೆಸ್ಸೆಸ್ ಪ್ರಕಾಶನ ಮಾಡಿದ್ದು ಏಕೆ? ಅಷ್ಟೇ ಅಲ್ಲ, ಈ ಪುಸ್ತಕ ಬೆಂಗಳೂರು, ವಿಜಯಪುರ, ಹಾವೇರಿ, ರಾಣೆಬೆನ್ನೂರ, ಕಲಬುರ್ಗಿ, ಬೆಳಗಾವಿ ಸೇರಿ 9 ಸ್ಥಳಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜ್ಯದವರೇ ಆದ ಆರೆಸ್ಸೆಸ್‌ನ ಪ್ರಮುಖ ಹೊಸಬಾಳೆ ಸೇರಿ ನಾಗ್ಪುರದಿಂದ ಮೂವರು ಆರೆಸ್ಸೆಸ್‌ನವರು ಬಂದಿದ್ದರು ಎಂದರು.