ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಹುಗಿದು ಹೋಗಿದ್ದ ಇನ್ನಷ್ಟು ಅವಶೇಷಗಳು 3ನೇ ಹಂತದ ಕಾರ್ಯಾಚರಣೆಯಲ್ಲಿ ಪತ್ತೆಯಾಗುತ್ತಿದ್ದು,
ರವಿವಾರ ನದಿ ಆಳದಲ್ಲಿ ಟ್ಯಾಂಕರ್‌ನ ಎಂಜಿನ್ ಮತ್ತು ಸ್ಕೂಟಿಯೊಂದು ದೊರೆತಿದೆ.
ಶನಿವಾರ ಟ್ಯಾಂಕರ್‌ನ ಎರಡು ಚಕ್ರಗಳು ಪತ್ತೆಯಾಗಿದ್ದವು.
ರವಿವಾರ ಮುಂಜಾನೆ ಗೋವಾದಿಂದ ಬಂದ ಡ್ರೆಜ್ಜಿಂಗ್ ಮಷಿನ್ ಜತೆ ಮುಳುಗು ತಜ್ಞ ಈಶ್ವರ ಮಲ್ಪೆ ಕೂಡ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಈಶ್ವರ ಅವರು ಸ್ಕೂಟಿ ಇರುವುದನ್ನು ಪತ್ತೆ ಮಾಡಿದರೆ, ಡ್ರೆಜ್ಜಿಂಗ್ ಮಷಿನ್‌ಗೆ ಟ್ಯಾಂಕರ್ ಎಂಜಿನ್ ದೊರೆತಿದೆ.
Laxmi News 24×7