ಮುಂಬಯಿ: ಹಿಂದಿ ಬಿಗ್ ಬಾಸ್-18 (Bigg Boss -18) ಕಾರ್ಯಕ್ರಮ ಆರಂಭಕ್ಕೆ ಡೇಟ್ ಫಿಕ್ಸ್ ಆಗಿದೆ. ಆ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ.
ಸಲ್ಮಾನ್ ಖಾನ್ (Salman Khan) ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮದ ಪ್ರೋಮೊ ಇತ್ತೀಚೆಗೆ ರಿಲೀಸ್ ಆಗಿತ್ತು.
“ಬಿಗ್ ಬಾಸ್ ನೋಡಲಿದ್ದಾರೆ ಮನೆಯವರ ಭವಿಷ್ಯ, ಈಗ ಆಗಲಿದೆ ಸಮಯದ ತಾಂಡವ್” ಎಂದು ಸಲ್ಮಾನ್ ಖಾನ್ ಅವರ ಹಿನ್ನೆಲೆ ಧ್ವನಿಯಲ್ಲಿ ಹೊಸ ಸೀಸನ್‌ನ ಲೋಗೋ ರಿವೀಲ್ ಆಗಿತ್ತು.
ಶೋನಲ್ಲಿ ಈ ಬಾರಿ ಇರುವ ಟ್ವಿಸ್ಟ್ ಹಾಗೂ ವಿಭಿನ್ನ ಕಾರ್ಯ ತಂತ್ರದ ಬಗ್ಗೆ ಸಲ್ಮಾನ್ ಹೇಳಿ ಇದೇ ಅಕ್ಟೋಬರ್ 6 ರಂದು ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ ಎಂದು ಡೇಟ್ ರಿವೀಲ್ ಮಾಡಲಾಗಿದೆ.
ಇನ್ನೊಂದೆಡೆ ಈ ಬಾರಿ ಯಾರೆಲ್ಲಾ ಶೋನಲ್ಲಿ ಭಾಗಿಯಾಗುತ್ತಾರೆ ಎನ್ನುವುದರ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜನಪ್ರಿಯ ಕಲಾವಿದರಾದ ಇಶಾ ಕೋಪಿಕರ್, ಶೈನಿ ಅಹುಜಾ, ಗುರುಚರಣ್ ಸಿಂಗ್, ಅರ್ಜುನ್ ಬಿಜ್ಲಾನಿ, ಕರಣ್ ಪಟೇಲ್, ಸಮೀರಾ ರೆಡ್ಡಿ, ಸುರಭಿ ಜ್ಯೋತಿ, ಪೂಜಾ ಶರ್ಮಾ ಶೋಯೆಬ್ ಇಬ್ರಾಹಿಂ ಮತ್ತು ದಲ್‌ಜೀತ್ ಕೌರ್ ಈ ಬಾರಿಯ ಶೋನಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ.