Breaking News

ಯತ್ನಾಳ್-ಕಾಶಪ್ಪನವರ್ ನಡುವೆ ‘ಟಿಪ್ಪು-ಔರಂಗಜೇಬ’ ಗಲಾಟೆ! ನಾಲಿಗೆ ಹರಿಬಿಟ್ಟ ನಾಯಕರು!

Spread the love

ಬಾಗಲಕೋಟೆ: ಟಿಪ್ಪು ಸುಲ್ತಾನ್ (Tipu Sultan) ಹಾಗೂ ಔರಂಗಜೇಬ್ (Aurangzeb) ವಿಚಾರಕ್ಕೆ ವಿಜಯಪುರ ಶಾಸಕ (Vijayapura MLA) ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹಾಗೂ ಬಾಗಲಕೋಟೆಯ (Bagalkot) ಹುನಗುಂದ ಶಾಸಕ (Hungunda MLA) ವಿಜಯಾನಂದ ಕಾಶಪ್ಪನವರ್ (Vijayananda Kashappanaar) ಟಾಕ್ ಫೈಟ್ ಜೋರಾಗಿದೆ.

ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ವಿರುದ್ಧ ಯತ್ನಾಳ್ ಏಕವಚನದಲ್ಲಿ ಟೀಕಿಸಿದ್ದರು. ಇದಕ್ಕೆ ವಿಜಯಾನಂದ ಕಾಶಪ್ಪನವರ್ ಏಕವಚನದಲ್ಲಿಯೇ ತಿರುಗೇಟು ನೀಡಿದ್ದಾರೆ. ಈ ದೇಶ ಕಂಡ ವೀರ ಧೀರ ಅನಿಸಿಕೊಂಡಂತಹ ಸನ್ಮಾನ್ಯ ಟಿಪ್ಪು ಸುಲ್ತಾನ್ ಅವರ ಬಗ್ಗೆ ಏನೇನೋ ಮಾತಾಡ್ತಾರೆ. ಬಾಯಿಗೆ ಬಂದ ಹಾಗೆ **** ಅಂತಾರೆ. ಇದು ಇವರ ಸೌಜನ್ಯತೆನಾ? ಮೊನ್ನೆ ಯತ್ನಾಳ ಮುಧೋಳದಲ್ಲಿ ಮಾತನಾಡಿದ್ದಾರೆ.. ಇದು ಅವರ ಸೌಜನ್ಯತೆ ತೋರಿಸಿಕೊಡುತ್ತದೆಯಾ? ಟಿಪ್ಪು ಯಾರಿಗೆ ಹುಟ್ಟಿದ *** ಮಗ ಅಂತ ಕೇಳ್ತಾರೆ. ಹಾಗಾದರೆ ಇವರು ಯಾರಿಗ್ ಹುಟ್ಟಿದ ***** ಮಕ್ಕಳು ಅಂತ ಬೈಯ್ಯುವ ಭರದಲ್ಲಿ ವಿಜಯಾನಂದ ಕಾಶಪ್ಪನವರ್ ನಾಲಿಗೆ ಹರಿಬಿಟ್ಟಿದ್ದಾರೆ.

ಇವರು ಯಾವ ದೇಶದವರಿಗೆ ಹುಟ್ಟಿದವರು?

ಅದನ್ನ ಅವರು ಮೊದಲು ಪ್ರಶ್ನೆ ಹಾಕಿಕೊಳ್ಳಲಿ, ಈ ದೇಶಕ್ಕೆ ಹುಟ್ಟಿದಾರೋ ಬೇರೆ ದೇಶದವರಿಗೆ ಹುಟ್ಟಿದಾರಾ ಅಂತ. ಈ ದೇಶದಲ್ಲಿ ಹುಟ್ಟಿದವರನ್ನು ಯಾರಿಗೆ ಹುಟ್ಟಿದ್ದಾರೆ ಅಂತ ಕೇಳ್ತಾರೆ ಅಂದ್ರೆ ಇವರು ಯಾರಿಗೆ ಹುಟ್ಟಿದಾರೆ ಅನ್ನೋದು ನನ್ನ ಪ್ರಶ್ನೆ. ಇವರು ಭಾರತ ದೇಶದವರಿಗೆ ಹುಟ್ಟಿದಾರಾ? ಅಥವಾ ಬೇರೆ ದೇಶರಿಗೆ ಹುಟ್ಟಿದಾರಾ? ಅಂತ ಕಾಶಪ್ಪನವರ್ ಲಘುವಾಗಿ ಮಾತನಾಡಿದ್ದಾರೆ.

ಮುಚ್ಕೊಂಡು ಸುಮ್ಮನೆ ಇರಬೇಕು!

ಭಾರತ ದೇಶದಲ್ಲಿದ್ದೀವಿ, ಇಲ್ಲಿನ ತತ್ವ ಸಿದ್ಧಾಂತವೇನು? ಪ್ರಜಾಪ್ರಭುತ್ವವೇನು? ಜಾತ್ಯತೀತ ಎಂದರೇನು? ಇವತ್ತು ಇವರು ಕೂಡ ಪವಿತ್ರವಾದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕಾರ ಮಾಡುತ್ತಾರಲ್ಲ, ಆ ಸಂವಿಧಾನದ ಮೇಲೆ ಗೌರವ ಇದೆಯಾ ಇವರಿಗೆ? ಇದ್ರೆ ಮುಚ್ಕೊಂಡು ಸುಮ್ಮನೆ ಇರಬೇಕು ಅಂತ ಯತ್ನಾಳ್‌ಗೆ ಕಾಶಪ್ಪನವರ್ ಎಚ್ಚರಿಕೆ ನೀಡಿದ್ದಾರೆ.

ನಾವೇನು ಯತ್ನಾಳ್ ಗುಲಾಮರಲ್ಲ

ಇನ್ನು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧವೂ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದ್ರು. ಒಂದು ಪಕ್ಷದ ಪರವಾಗಿ ರಾಜಕಾರಣ ಮಾಡೋದು ಬಿಟ್ಟು ಸುಮ್ಮನೆ ಸಮಾಜ ಕಟ್ಟಲಿ. ನಾವು ಅದರೆ ಪಂಚಮಸಾಲಿಗಳು ಯತ್ನಾಳರ ಗುಲಾಮರಲ್ಲ ಅಂತ ಕಿಡಿಕಾರಿದ್ರು.

ಸ್ವಾಮೀಜಿ ಹತಾಶರಾಗಿ ಮಾತನಾಡ್ತಿದ್ದಾರೆ

ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯಗೆ ನಮ್ಮ ಸಮಾಜದ ಬಗ್ಗೆ ಗೌರವ ಇಲ್ಲ, ನಾವೇ ಭಯ ಪಡುವ ಸ್ಥಿತಿ ಇದೆ ಎಂದಿದ್ದ ಸ್ವಾಮೀಜಿಗೆ ಟಾಂಗ್ ಕೊಟ್ರು. ಸ್ವಾಮೀಜಿ ಹತಾಶರಾಗಿ ಮಾತಾಡ್ತಿದ್ದಾರೆ. ನಮ್ಮ ಸಮಾಜದ ಗುರುಗಳಿಗೆ ಗೌರವಯುತವಾಗಿ ಹೇಳ್ತೇನೆ, ರಾಜಕಾರಣ ಮಾತಾಡೋದು ಬಿಟ್ಟು, ರಾಜಕಾರಣಿಗಳ ಹಿಂದೆ ಬೆನ್ನು ಹತ್ತುವುದು ಬಿಟ್ಟು, ಬಡವರು, ಭಕ್ತರು, ಸಮಾಜದ ಕಡೆಗೆ ನೋಡಲಿ ಅಂತ ಸಲಹೆ ಕೊಟ್ರು.

ಕೇಳ್ರೀ ಆ ಸ್ವಾಮೀಜಿಗೆ

ಮೀಸಲಾತಿ ಕೊಡಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಾನೇ, ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಮುಖ್ಯಮಂತ್ರಿಗಳು ಎಲ್ಲಿ ಹೆದರಿಸಿದ್ದಾರೆ? ಸಿಎಂ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ, ಸರ್ವೋಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ, ಅದು ತೆರವು ಆಗೋವರೆಗೂ ಯಾವುದೇ ನಿರ್ಣಯ ಸರ್ಕಾರ ತೆಗೆದುಕೊಳ್ಳಲು ಆಗಲ್ಲ ಅಂತ ಹೇಳಿದ್ದಾರೆ. ಈಗ ಸ್ವಾಮೀಜಿ ಬಸವರಾಜ್ ಬೊಮ್ಮಾಯಿ ಗೌರವ ಕೊಡ್ತಿದ್ರು ಅಂತಾರಲ್ಲ. 2ಡಿ, 2 ಸಿ ಏನಾದರೂ ನಮ್ಮ‌ ಸಮುದಾಯಗಳಿಗೆ ಮೀಸಲಾತಿ ಸಿಗ್ತಾ ಇದೆಯಾ? ಕೇಳ್ರಿ ಆ ಸ್ವಾಮೀಜಿಗೆ? ಅಂತ ಕಿಡಿಕಾರಿದ್ರು.


Spread the love

About Laxminews 24x7

Check Also

ಲೇಔಟ್ ಗಳಲ್ಲಿ ಮೂಲ ಸೌಕರ್ಯಗಳ ಕೊರತೆ: ಸೂಕ್ತ ಕ್ರಮಕ್ಕೆ ಆಗ್ರಹ

Spread the love ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು ಲೇಔಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ