ಬೆಂಗಳೂರು : ಹೂ ಅಲ್ ಶಿಫಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್, ಹಾಗೂ ಕರ್ನಾಟಕದ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘರ್ಷ ಸಮಿತಿ ಸಹಯೋಗದಲ್ಲಿ 2020ನೇ ಸಾಲಿನ ‘ವೀರ ಕನ್ನಡಿಗ ಪ್ರಶಸ್ತಿ’ಗೆ ಬೆಳಗಾವಿ ಜ್ಯೂನಿಯರ್ ಶಿವರಾಜ್ ಕುಮಾರ್ ( ಇಸ್ಮಾಯಿಲ್ ಪೀರಜಾದೆ) ಆಯ್ಕೆಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಗುರುಭವನ ಸಂಭಾಣಗದಲ್ಲಿ ಇದೇ 29ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 2020 ನೇ ಸಾಲಿನ ಪ್ರಶಸ್ತಿಗೆ ಹತ್ತು ಜನರ ಸಾಧಕರು ಭಾಜನರಾಗಿದ್ದಾರೆ.
ಲಿಂಗಸುಗೂರು ಶಾಸಕ ಡಿ.ಎಸ್.ಹೊಲಗೇರಿ ಕಾರ್ಯಕ್ರಮದ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಅಲ್ದಾಳ ವಹಿಸಲಿದ್ದಾರೆ. ಗಣ್ಯರು ಸಮಾರಂಭದಲ್ಲಿ ಭಾವಹಿಸಲಿದ್ದಾರೆ.
Laxmi News 24×7