Breaking News

ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭ

Spread the love

ಬೆಂಗಳೂರು: ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭಿಸಿದೆ.ಆರ್ಥಿಕ ಸಂಕಷ್ಟದ ನಡುವೆ ಸಿಎಂ ಯಡಿಯೂರಪ್ಪ, 2021-22ನೇ ಸಾಲಿನ ಆಯವ್ಯಯ ಮಂಡಿಸಬೇಕಾಗಿದೆ.

ತೆರಿಗೆ ಸಂಗ್ರಹದಲ್ಲಿನ ಕೊರತೆ, ಸೀಮಿತ ಆದಾಯ ಮೂಲ ಸರ್ಕಾರದ ಕೈಯನ್ನು ಕಟ್ಟಿ ಹಾಕಿದೆ. ಹೀಗಾಗಿ 2021-22ನೇ ಸಾಲಿನ ಆಯವ್ಯಯ ಸಿಎಂಗೆ ಕಬ್ಬಿಣದ ಕಡಲೆಯಾಗಿದೆ. ಒಂದೆಡೆ ಜನಪ್ರಿಯ ಯೋಜನೆಗಳು ಕೊಡುವ ಅಗತ್ಯವೂ ಇದೆ, ಇನ್ನೊಂದೆಡೆ ಪ್ರಮುಖ ಇಲಾಖೆಗಳಿಗೆ ಅನುದಾನ ಕಡಿತಗೊಳಿಸು ಹಾಗಿಲ್ಲ. ಈ ಎಲ್ಲಾ ಅನಿವಾರ್ಯತೆಗಳ ಮಧ್ಯೆ
ಯಾವ ರೀತಿ ಬಜೆಟ್ ಮಂಡಿಸಬೇಕು ಎಂಬುದು ಬಿಜೆಪಿ ಸರ್ಕಾರಕ್ಕೆ ಸವಾಲಿನ ಸಂಗತಿಯಾಗಿದೆ.

ಈಗಾಗಲೇ ಎಲ್ಲಾ ಇಲಾಖೆಗಳಿಗೆ ಅಂದಾಜು ಅನುದಾನ, ಖರ್ಚು ವೆಚ್ಚಗಳ ವಿವರಗಳ ಲೆಕ್ಕಾಚಾರ ನೀಡುವಂತೆ ನಿರ್ದೇಶನ ನೀಡಿದೆ.
ಇಲಾಖಾ ಮುಖ್ಯಸ್ಥರು ಈ ಅಂದಾಜುಗಳನ್ನು ಪರಿಶೀಲಿಸಿ ಕ್ರೋಢೀಕೃತ ಅಂದಾಜುಗಳನ್ನು ತಮ್ಮ ಷರಾದೊಂದಿಗೆ ಸಚಿವಾಲಯದ ಆಂತರಿಕ ಆರ್ಥಿಕ ಸಲಹೆಗಾರರ ಮುಖಾಂತರ, ನಿಗದಿಪಡಿಸಿದ ದಿನಾಂಕಗಳಿಗಿಂತ ಮುಂಚಿತವಾಗಿ ಆರ್ಥಿಕ ಇಲಾಖೆಗೆ ಕಳುಹಿಸಿಕೊಡುವಂತೆ ಸುತ್ತೋಲೆ ಹೊರಡಿಸಿದೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ