ಚಿಕ್ಕೋಡಿ: ತಾಲೂಕಿನ ಕಬ್ಬೂರ ಪಟ್ಟಣದ ಹನುಮಾನ ನಗರದ ತೋಟದ ಹತ್ತಿರ ಪೈಪಲೈನ್ ಹರಿ ತೆಗಿಯುವಾಗ ಜೆಸಿಬಿಗೆ ಸಿಲುಕಿ 3 ವರ್ಷದ ಬಾಲಕಿ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.
ಪಟ್ಟಣ ಪಂಚಾಯತಿ ವತಿಯಿಂದ ಜಲಕುಂಭ ಕಾಮಗಾರಿಯನ್ನು ರಮೇಶ ಕುಕನೂರ ಎಂಬುವರ ಮನೆ ಮುಂದುಗಡೆ ರಸ್ತೆಯ ಬದಿ ಪೈಪಲೈನ್ ಹರಿ ತೆಗೆಯುವಾಗ ಮನೆಯ ಹತ್ತಿರ ಆಟ ಆಡುತ್ತಿದ್ದ 3 ವರ್ಷದ ಬಾಲಕಿ ಭೂಮಿಕಾ ರಮೇಶ ಕುಕನೂರ ಜೆಸಿಬಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಈ ಘಟನೆಯಿಂದಾಗಿ ಮೃತ ಬಾಲಕಿಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಚಿಕ್ಕೋಡಿಯ ಪಿಎಸ್‌ಐ ಬಸಗೌಡ ನೆರ್ಲಿ,ಎಎಸ್‌ಐ ಮಾರುತಿ ಉಗಾರೆ ಸೇರಿದಂತೆ ಸಿಬ್ಬಂದಿಗಳು ಪರಿಶೀಲಿಸಿದ್ದಾರೆ.