ಹಾಸನ: ಭೂತಕಾಲ, ವರ್ತಮಾನಕಾಲ, ಭವಿಷ್ಯತ್ ಕಾಲ ಇದೆ. ಭವಿಷ್ಯ ಏನೆಂದು ಯಾರಿಗೆ ಗೊತ್ತಿದೆ?, ಸಿಎಂ ತೀರ್ಮಾನ ಮಾಡೋದು ಹೈಕಮಾಂಡ್, ಆಸೆ ಪಡೋದು ತಪ್ಪಲ್ಲ, ಆದರೆ ದುರಾಸೆ ತಪ್ಪು. ಶಾಸಕರ ಬೆಂಬಲ ಇರೋವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.
ರಾಜಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಖಾಲಿ ಜಾಗ ಇದ್ದರೆ ಟವಲ್ ಹಾಕಬಹುದು. ಜಾಗವೇ ಖಾಲಿ ಇಲ್ಲ, ಟವಲ್ ಹೇಗೆ ಹಾಕ್ತಾರೆ ಎಂದ