Breaking News

ಚಾರ್ಜ್​ಶೀಟ್​ ಸಲ್ಲಿಕೆ ಹೊತ್ತಲ್ಲೇ ಜೈಲಧಿಕಾರಿಗಳ ಬಳಿ ಈ ಒಂದು ಸೌಲಭ್ಯಕ್ಕೆ ಬೇಡಿಕೆ ಇಟ್ಟ ದರ್ಶನ್!​

Spread the love

ಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಸುದ್ದಿ ಭಾರಿ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರವಾಗಿರುವ ನಟ ದರ್ಶನ್​, ಜೈಲಧಿಕಾರಿಗಳ ಮುಂದೆ ಹೊಸದೊಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಚಾರ್ಜ್​ಶೀಟ್​ ಸಲ್ಲಿಕೆ ಹೊತ್ತಲ್ಲೇ ಜೈಲಧಿಕಾರಿಗಳ ಬಳಿ ಈ ಒಂದು ಸೌಲಭ್ಯಕ್ಕೆ ಬೇಡಿಕೆ ಇಟ್ಟ ದರ್ಶನ್!​

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನಟ ದರ್ಶನ್​ ಜೈಲು ಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರುವಾಗ ರೌಡಿ ವಿಲ್ಸನ್​ ನಾಗನ ಜತೆ ಕುಳಿತು, ಸಿಗರೇಟ್​ ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೋ ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದು ಭಾರಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ದರ್ಶನ್​ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಿದೆ.

ಇದೀಗ ಬಳ್ಳಾರಿಯ ಜೈಲಿನಲ್ಲಿ ದಿನ ದೂಡುತ್ತಿರುವ ನಟ ದರ್ಶನ್​ ಜೈಲು ಅಧಿಕಾರಿಗಳ ಬಳಿ ಹೊಸದೊಂದು ಬೇಡಿಕೆ ಇಟ್ಟಿದ್ದಾರಂತೆ. ಇಷ್ಟು ದಿನ ಟಿವಿ ಬೇಡ ಎನ್ನುತ್ತಿದ್ದ ದರ್ಶನ್​, ಇದೀಗ ನನಗೆ ಟಿವಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಟಿವಿ ಸೌಲಭ್ಯ ಸಂಬಂಧ ಅರ್ಜಿ ಸಲ್ಲಿಸುವಂತೆ ಜೈಲು ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇಡೀ ಪ್ರಕರಣದ ತನಿಖೆ ಮುಕ್ತಾಯವಾಗಿದ್ದು, ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇಂದು ಅಥವಾ ನಾಳ ಯಾವಾಗಬೇಕಾದರೂ ತನಿಖಾಧಿಕಾರಿಗಳು ಕೋರ್ಟ್​ ಮುಂದೆ ಚಾರ್ಜ್​ಶೀಟ್​ ಸಲ್ಲಿಸಬಹುದು. ಈ ಹೊತ್ತಿನಲ್ಲೇ ದರ್ಶನ್​, ಟಿವಿಗೆ ಬೇಡಿಕೆ ಇಟ್ಟಿದ್ದಾರೆ. ಚಾರ್ಜ್​ಶೀಟ್​ ಸಲ್ಲಿಕೆಯಾದ ಬಳಿಕ ಜಾಮೀನು ಪಡೆಯಲು ಅರ್ಜಿ ಸಲ್ಲಿಸಹುದು. ಹೀಗಾಗಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗುವ ಅಂಶಗಳ ಮೇಲೆ ಎಲ್ಲರ ಗಮನವಿದೆ. ಹೀಗಾಗಿ ದರ್ಶನ್​ ಕೂಡ ಚಾರ್ಜ್​ಶೀಟ್​ ಬಗ್ಗೆ ತಿಳಿದುಕೊಳ್ಳಲು ಟಿವಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಚಾರ್ಜ್​ಶೀಟ್​ ಸಲ್ಲಿಸಿದ ಮೇಲೆಯೇ ದರ್ಶನ್​, ಜಾಮೀನಿಗೆ ಅರ್ಜಿ‌ ಹಾಕುವ ಸಾಧ್ಯತೆ ಇದೆ. ಮೊನ್ನೆ ಪತ್ನಿ ವಿಜಯಲಕ್ಷ್ಮಿಯಿಂದ ಈ ಬಗ್ಗೆ ಮಾಹಿತಿ ಪಡೆದು ನ್ಯಾಯಂಗದ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಚಾರ್ಜ್​ಶೀಟ್​ ಕೊಂಚ ಆತಂಕಕ್ಕೆ ಕಾರಣವಾಗಿದ್ದರೂ ಕೊಂಚ ನಿರಾಳವನ್ನು ತಂದಿದೆ. ಏಕೆಂದರೆ, ಚಾರ್ಜ್​ಶೀಟ್​ ಸಲ್ಲಿಕೆಯಾದರೆ, ಜಾಮೀನಿಗೆ ಅರ್ಜಿ ಸಲ್ಲಿಸಿ, ಮನವಿ ಮಾಡಲು ಅನುಕೂಲವಾಗಲಿದೆ.


Spread the love

About Laxminews 24x7

Check Also

ಪರೀಕ್ಷೆ ಬರೆದ 11ದಿನದಲ್ಲಿ ಪ್ರಕಟಗೊಂಡಿದೆ ಫಲಿತಾಂಶ

Spread the love ಬೆಳಗಾವಿ: ಆರ್‌ಪಿಡಿ ಕಾಲೇಜು, ಚೆನ್ನಮ್ಮ ವಿವಿಯಿಂದ ಸ್ಪಾಯತ್ತತೆ, ಮೊದಲ ಫಲಿತಾಂಶ ಬೆಳಗಾವಿ : ಇಲ್ಲಿನ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ