ಬೆಂಗಳೂರು: ಸ್ಯಾಂಡಲ್ವುಡ್ ನಟಿ ಸಂಯುಕ್ತ ಹೊರನಾಡು ಅವರು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ. ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾ ಮೂಲಕವಾಗಿ ಹಂಚಿಕೊಂಡಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ ಮರಿಯನ್ನು ನಟಿ ಸಂಯುಕ್ತಾ ಹೊರನಾಡ್ ದತ್ತು ಪಡೆದಿದ್ದಾರೆ.
ಈ ಹುಲಿ ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ವಾಸಿಸಲು ಆಗದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಂರಕ್ಷಣಾ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.
ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿ ಪ್ರಿಯರ ಮೆಚ್ಚುಗೆ ಪಡೆದ ಈ ನಟಿ, ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಂಸ್ಥೆ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಎರಡು ವರ್ಷದ ಹುಲಿ ಮರಿಯೊಂದನ್ನು ದತ್ತು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಯುಕ್ತ ಟ್ವೀಟ್ನಲ್ಲಿ ಏನಿದೆ?: ನಿನ್ನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದತ್ತು ಪಡೆದ 28 ತಿಂಗಳ ಹೆಣ್ಣು ಮರಿ ಸಿಂಚನಾ ನರವೈಜ್ಞಾನಿಕ ದೌರ್ಬಲ್ಯದಿಂದ ಬಳಲುತ್ತಿದ್ದು, ಕಾಡಿನಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ. ಬಿಬಿಪಿಯ ರಕ್ಷಣಾ ಕೇಂದ್ರದಲ್ಲಿ ಮರಿಯನ್ನು ಆರೈಕೆ ಮಾಡಲಾಗುತ್ತಿದೆ. ದತ್ತು ಕಾರ್ಯಕ್ರಮವು ಮರಿಯ ದೈನಂದಿನ ಆಹಾರ ಅಗತ್ಯತೆಗಳು, ನಿರ್ವಹಣೆ ಮತ್ತು ಪಶುವೈದ್ಯಕೀಯ ಆರೋಗ್ಯ ಆರೈಕೆ ವೆಚ್ಚಗಳನ್ನು ಒಳಗೊಂಡಿದೆ.