Breaking News

ನವೀಕರಣವಾಗದ ಲೀಸ್‌ ಆಸ್ತಿಯಿಂದ ನಷ್ಟ

Spread the love

ಹುಬ್ಬಳ್ಳಿ: ಲೀಸ್‌ಗೆ ನೀಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಗಳ ನವೀಕರಣವಾಗದ ಕಾರಣ ಪಾಲಿಕೆಗೆ ಪ್ರತಿ ವರ್ಷ ₹50 ಕೋಟಿಯಿಂದ ₹100 ಕೋಟಿವರೆಗೆ ನಷ್ಟವಾಗುತ್ತಿದೆ.

ಮಹಾನಗರ ಪಾಲಿಕೆಯ ₹2,744 ಆಸ್ತಿಗಳನ್ನು ಲೀಸ್‌ಗೆ ನೀಡಲಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದಿಂದ ಒಂದು ವರ್ಷದ ಅವಧಿಯಿಂದ 999 ವರ್ಷಗಳ ಅವಧಿಗೆ ಲೀಸ್‌ಗೆ ನೀಡಿರುವ ಆಸ್ತಿಗಳು ಅದರಲ್ಲಿವೆ.

 

ಕೆಲವರಿಗೆ 50 ಚದರ ಅಡಿ ಆಸ್ತಿಯನ್ನು ಸಹ ಲೀಸ್ ನೀಡಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಗೆ ಕೆಲವು ಆಸ್ತಿಗಳು ಒತ್ತುವರಿಯಾಗಿದ್ದರೆ, ಮಠ, ಕ್ರೀಡಾಂಗಣ ನಿರ್ಮಾಣ, ಕೊಳೆಗೇರಿ ಅಭಿವೃದ್ಧಿ ಮಂಡಳಿಗೂ ಹಲವು ಆಸ್ತಿಗಳನ್ನು ಹಸ್ತಾಂತರಿಸಲಾಗಿದೆ. ಈ ಬಗ್ಗೆ ಸರಿಯಾಗಿ ಪರಿಶೀಲನೆ ಸಹ ಆಗುತ್ತಿಲ್ಲ.

ಆಸ್ತಿಗಳ ಲೀಸ್‌ ನವೀಕರಿಸಬಾರದು, ಖರೀದಿಗೆ ಕೊಡಬಾರದು ಎಂದು ಸರ್ಕಾರ 2013ರಲ್ಲಿ ಆದೇಶಿಸಿದೆ. ಅದರ ಅನ್ವಯ ಸದ್ಯ ನವೀಕರಣ, ಖರೀದಿಗೆ ಕೊಡಲು ಮಹಾನಗರ ಪಾಲಿಕೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕು.

ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಐದು ವರ್ಷಗಳಿಗೊಮ್ಮೆ ಲೀಸ್ ಆಸ್ತಿಗಳನ್ನು ನವೀಕರಣ ಮಾಡಲಾಗುತ್ತಿತ್ತು. ಸರ್ಕಾರದ ಆದೇಶದಿಂದಾಗಿ ಲೀಸ್‌ ಪಡೆದವರು ಯಾವುದೇ ತೆರಿಗೆ ಪಾವತಿಸುತ್ತಿಲ್ಲ. ತೆರಿಗೆ ಕಟ್ಟಲು ಮುಂದೆ ಬರುವವರಿಂದಲೂ ಪಾವತಿಸಿಕೊಳ್ಳಲು ಅವಕಾಶ ಇಲ್ಲದಂತಾಗಿದೆ.


Spread the love

About Laxminews 24x7

Check Also

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೌರಶಕ್ತಿ ಬಲ

Spread the loveಹುಬ್ಬಳ್ಳಿ: ವಾಣಿಜ್ಯ ‌ನಗರಿ ಹುಬ್ಬಳ್ಳಿ ವಿಮಾನ ‌ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ‌. ಇದರ ಭಾಗವಾಗಿ ಹುಬ್ಬಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ