ಚಿಕ್ಕೋಡಿ: ಮೇಲಿಂದ ಮೇಲೆ ಬರುವ ನದಿ ಪ್ರವಾಹ ಭೀತಿಯಿಂದ ಹೊರ ಬರಲು ನದಿ ತೀರದ ಬಹುತೇಕ ಜನರು ಮಹಡಿ ಮನೆಗಳ ಮೊರೆ ಹೋಗಿದ್ದಾರೆ. ತೋಟದ ವಸತಿ ಪ್ರದೇಶದಲ್ಲೂ ಮಹಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ಹಾಗೂ ಉಪ ನದಿಗಳಲ್ಲಿ ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ನದಿ ತೀರದ ಜನರು ಜೀವ ಕೈಯಲ್ಲಿ ಹಿಡಿದು ದಿನ ದೂಡಬೇಕಾಗುತ್ತದೆ.
ಅದರಲ್ಲೂ ಕೃಷ್ಣಾ ನದಿ ತೀರದ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ, ಇಂಗಳಿ, ಯಡೂರ, ಚಂದೂರ, ಕಲ್ಲೋಳ, ಅಂಕಲಿ ಸೇರಿ ಅನೇಕ ಗ್ರಾಮಗಳು ಕೃಷ್ಣಾ ನದಿ ತೀರಕ್ಕೆ ಹೊಂದಿಕೊಂಡಿವೆ.
2019ರಲ್ಲಿ ಪ್ರವಾಹ ಭೀತಿಯಂತೂ ಈ ಗ್ರಾಮಗಳಲ್ಲಿ ದೊಡ್ಡ ಆಘಾತವನ್ನೇ ಉಂಟು ಮಾಡಿತ್ತು. ಹೀಗಾಗಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ 4 ಸಾವಿರಕ್ಕೂ ಹೆಚ್ಚು ಮನೆಗಳು ಮಂಜೂರಾಗಿದ್ದವು. ಪೂರ್ಣ ಬಿದ್ಧ ಮನೆಗೆ ಪರಿಹಾರವಾಗಿ ₹5 ಲಕ್ಷ ರಾಜೀವ್ ಗಾಂಧಿ ವಸತಿ ನಿಗಮದಿಂದ ನೀಡಲಾಗಿತ್ತು. ಈಗಾಗಲೇ 3600ಕ್ಕೂ ಹೆಚ್ಚು ಮನೆಗಳನ್ನು ಸಂತ್ರಸ್ತರು ನಿರ್ಮಿಸಿಕೊಂಡಿದ್ದು, ಇವರಲ್ಲಿ ಶೇ 30 ರಷ್ಟು ಸಂತ್ರಸ್ತರು ಮಹಡಿ ಮನೆಯನ್ನು ಕಟ್ಟಿಕೊಂಡಿದ್ದಾರೆ.
ಒಂದು ಸಾವಿರಕ್ಕೂ ಹೆಚ್ಚು ಮಹಡಿ ಮನೆಗಳನ್ನು ಕೃಷ್ಣಾ ನದಿ ತೀರದ ಗ್ರಾಮದ ಸಂತ್ರಸ್ತರು ನಿರ್ಮಿಸಿಕೊಂಡಿದ್ದು, ಪ್ರವಾಹ ಭೀತಿ ಬಂದರೂ ಕೂಡ ಮಹಡಿ ಮನೆಯಲ್ಲಿ ಸಾಮಾನು ಸರಂಜಾಮುಗಳನ್ನು ಇಟ್ಟು ಕಾಳಜಿ ಕೇಂದ್ರ ಸೇರಿದಂತೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಅನುಕೂಲವಾಗುತ್ತಿದೆ. ಕೆಳಗಿನ ಮನೆಗೆ ಪ್ರವಾಹದಿಂದ ನೀರು ಹೊಕ್ಕರೂ ಕೂಡ ಮೇಲಿನ ಮನೆಗಳಲ್ಲಿ ವಾಸ ಮಾಡಲು ಅನುಕೂಲವಾಗುತ್ತದೆ ಎಂಬ ಕಾರಣದಿಂದ ಹೀಗೆ ಮಹಡಿ ಮನೆಗಳ ನಿರ್ಮಾಣದ ಮೊರೆ ಹೋಗಿದ್ದು ಕಂಡು ಬರುತ್ತಿ