ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕಾಯುತ್ತಿದ್ದ ವರದಿ ಸದ್ಯ ಅವರ ಕೈ ಸೇರಿದೆ. ಚಾರ್ಜ್ಶೀಟ್ ಸಿದ್ಧತೆಯಲ್ಲಿರುವ ತನಿಖಾಧಿಕಾರಿಗಳು CSFL ಅಂದ್ರೆ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದರು. ಸದ್ಯ ಅದು ತನಿಖಾಧಿಕಾರಿಗಳ ಕೈಸೇರಿದೆ. ದರ್ಶನ್, ಪವಿತ್ರಾಗೌಡ ಸೇರಿ ಒಟ್ಟು 13 ಮಂದಿ ಆರೋಪಿಗಳ ಮೊಬೈಲ್ ರಿಟ್ರೀವ್ಗೆ ಹೈದ್ರಾಬಾದ್ನ CSFLಗೆ ಕಳುಹಿಸಿಕೊಡಲಾಗಿತ್ತು. ಸದ್ಯ ಬಂದಿರುವ ವರದಿಯನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.
13 ಮಂದಿಯ ಮೊಬೈಲ್ ಸೇರಿ ಕೆಲವು ಸಿಸಿಟಿವಿ ಡಿವಿಆರ್ ರಿಟ್ರೀವ್ಗೆ ಕೂಡ ಹೈದ್ರಾಬಾದ್ನ CFSLಗೆ ತನಿಖಾ ತಂಡ ಕಳುಹಿಸಿತ್ತು. ಘಟನೆ ಸಂಬಂಧ, ಪಟ್ಟಣಗೆರೆ ಶೆಡ್ ಸಿಸಿಟಿವಿ ದೃಶ್ಯಾವಳಿಗಳನ್ನು ಆರೋಪಿಗಳು ಡಿಲೀಟ್ ಮಾಡಿದ್ದರು. ಸದ್ಯ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ಸಿಸಿಟಿವಿ ದೃಶ್ಯಾವಳಿಗಳನ್ನು ರಿಟ್ರೀವ್ ಮಾಡಿದೆ. ಅಲ್ಲದೇ ದರ್ಶನ್ ಪವಿತ್ರಾಗೌಡ ಸೇರಿ ಇತರೆ ಆರೋಪಿಗಳ ವಾಟ್ಸಾಪ್ ಚಾಟಿಂಗ್ ಕೂಡ ರಿಟ್ರೀವ್ ಆಗಿದೆ.