Breaking News

ಮಯೂರಿ ಬರ್ತ್‍ಡೇ ಸಂಭ್ರಮಕ್ಕೆ ಕಿಕ್ಕೇರಿಸಿತು ‘ಆದ್ಯಂತ’ ಫಸ್ಟ್ ಲುಕ್!

Spread the love

ಕಿರುತೆಯಿಂದ ಕಲಾಯಾನ ಆರಂಭಿಸಿ ಹಿರಿತೆರೆಯಲ್ಲೂ ಯಶಸ್ವಿ ನಾಯಕಿಯಾಗಿ ನೆಲೆ ಕಂಡುಕೊಂಡಿರುವವರು ಮಯೂರಿ ಕ್ಯಾತರಿ. ಪ್ರಬುದ್ಧವಾದ ನಿರ್ಧಾರಗಳ ಮೂಲಕ ಚೆಂದದ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿರೋ ಮಯೂರಿ ಇತ್ತೀಚೆಗಷ್ಟೇ ಸಾಂಸಾರಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಆ ಖುಷಿಯಲ್ಲಿರೋ ಅವರ ಪಾಲಿಗೆ ಈ ಬಾರಿಯ ಹುಟ್ಟುಹಬ್ಬ ನಿಜಕ್ಕೂ ಸ್ಪೆಷಲ್ಲು. ಅದನ್ನು ಮತ್ತೂ ಕಳೆಗಟ್ಟಿಸುಯವಂತೆ ‘ಆದ್ಯಂತ’ ಚಿತ್ರದ ಚೆಂದದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ.

 

ಆದ್ಯಂತ ಮಯೂರಿ ನಾಯಕಿಯಾಗಿ ನಟಿಸಿರೋ ಚಿತ್ರ. ಅವರ ಪಾಲಿಗಿದು ಮಹತ್ವಾಕಾಕ್ಷೆಯ ಮೈಲಿಗಲ್ಲು. ಪುನೀತ್ ಶರ್ಮಾ ನಿರ್ದೇಶನದ ಈ ಸಿನಿಮಾವನ್ನು ಲೇಖನಾ ಕ್ರಿಯೇಷನ್ಸ್ ಮತ್ತು ಆರ್.ಆರ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿದೆ. ಬಹುಕಾಲದಿಂದಲೂ ಆದ್ಯಂತ ಒಂದಷ್ಟು ಚರ್ಚೆಗೆ ಕಾರಣವಾಗಿತ್ತು. ಭಿನ್ನವಾದ ಟೈಟಲ್ಲು, ಅದಕ್ಕೆ ತಕ್ಕುದಾದ ಕಥೆಯ ಸುಳಿವುಗಳ ಮೂಲಕ ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ಬಿಡುಗಡೆಯಾಗಿರೋ ಫಸ್ಟ್ ಲುಕ್ ಅಂತೂ ಆದ್ಯಂತದತ್ತ ಎಲ್ಲರೂ ಕಣ್ಣು ಕೀಲಿಸುವಂತೆ ಮಾಡಿದೆ.

https://youtu.be/I1U-UG-NHuk

ಈ ಸಿನಿಮಾದಲ್ಲಿ ಮಯೂರಿ ಕ್ಯಾತರಿ ಪಾಲಿಗೆ ಬಯಸಿದ ಪಾತ್ರವೇ ಸಿಕ್ಕಿದೆಯಂತೆ. ಅದು ನಟನೆಗೆ ವಿಪುಲ ಅವಕಾಶಗಳಿರೋ ಪಾತ್ರ. ಬೆಂಗಳೂರಿಂದ ಸಕಲೇಶಪುರ ಪ್ರದೇಶಕ್ಕೆ ಶಿಫ್ಟ್ ಆಗಿ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡುವಂಥ ಧಾಟಿಯಲ್ಲಿ ಇಡೀ ಸಿನಿಮಾ ಮೂಡಿ ಬಂದಿದೆಯಂತೆ. ಆದ್ಯಂತದ ಬಗ್ಗೆ ಹೀಗೆ ಅಪಾದಮಸ್ತಕ ಕುತೂಹಲ ಮೂಡಿಕೊಂಡಿರೋದಕ್ಕೆ ಮತ್ತೊಂದು ಪ್ರಧಾನ ಕಾರಣವಾಗಿರೋದು ನಿರ್ದೇಶಕ ಪುನೀತ್ ಶರ್ಮಾರ ಸಿನಿಮಾ ಯಾನ.

 

ಪುನೀತ್, ರಾಜಮೌಳಿ ಮತ್ತು ರಾಮ್ ಗೋಪಾಲ್ ವರ್ಮಾರಂಥಾ ಪ್ರಸಿದ್ಧ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರೋ ಪ್ರತಿಭೆ. ಆ ಅನುಭವಗಳನ್ನೆಲ್ಲ ಪರಿಣಾಮಕಾರಿಯಾಗಿ ಒಟ್ಟುಗೂಡಿಸಿ ಆದ್ಯಂತ ಕಥೆ ಹೆಣೆದಿದ್ದಾರಂತೆ. ಈ ಕಾರಣದಿಂದಲೇ ಇದರ ಕಥೆ ವಿಭಿನ್ನವಾಗಿರಲಿದೆ ಅನ್ನೋ ನಂಬಿಕೆ ಎಲ್ಲರಲ್ಲಿಯೂ ಪಡಿಮೂಡಿಕೊಂಡಿದೆ. ಇದೀಗ ಬಿಡುಗಡೆಗೊಂಡಿರೋ ಫಸ್ಟ್ ಲುಕ್ ಆ ನಂಬಿಕೆಯನ್ನ ಮತ್ತಷ್ಟು ಗಟ್ಟಿಗೊಳಿಸುವಂತಿದೆ.

ರಮೇಶ್ ಬಾಬು ಟಿ ನಿರ್ಮಾಣ ಮಾಡಿ, ಪ್ರಕಾಶ್ ಎಲಗೋಡು ಮತ್ತು ಮೋಹನ್ ಕುಮಾರ್ ಆರ್.ಎಸ್ ಸಹ ನಿರ್ಮಾಪಕರಾಗಿರೋ ಚಿತ್ರ ಆದ್ಯಂತ. ಇದರ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಮಯೂರಿ, ದಿಲೀಪ್, ರಮೇಶ್ ಭಟ್, ಪ್ರಶಾಂತ್ ನಟನಾ, ಶ್ರೀನಾಥ್ ವಸಿಷ್ಠ, ಟಿಕ್‍ಟಾಕ್ ಖ್ಯಾತಿಯ ನಿಖಿಲ್ ಗೌಡ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮಯೂರಿ ತುಂಬಾನೇ ಹೋಪ್ ಇಟ್ಟುಕೊಂಡಿರೋ ಆದ್ಯಂತ ಕೊರೊನಾ ಕಂಟಕ ಕಳೆದ ಬಳಿಕ ಬಿಡುಗಡೆಯಾಗಲಿದೆ.


Spread the love

About Laxminews 24x7

Check Also

ಹಿಂದಿ ಚಿತ್ರರಂಗದ ಹಿ ಮ್ಯಾನ್ ಇನ್ನಿಲ್ಲ

Spread the love300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದ ನಟ ಧರ್ಮೇಂದ್ರ (Dharmendra) ಅವರು ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ