Breaking News

ಆಸ್ಟ್ರೇಲಿಯಾ ಸರಣಿಯಿಂದ ರೋಹಿತ್, ಇಶಾಂತ್ ಔಟ್..!

Spread the love

ಸಿಡ್ನಿ, ನ. 24- ಆಸ್ಟ್ರೇಲಿಯಾ ವಿರುದ್ಧ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾಗೆ ಭಾರೀ ಹೊಡೆತ ಬಿದ್ದಿದೆ.

ಐಪಿಎಲ್ ವೇಳೆ ಗಾಯಗೊಂಡಿದ್ದ ಮುಂಬೈ ಇಂಡಿಯನ್ಸ್‍ನ ನಾಯಕ ರೋಹಿತ್ ಶರ್ಮಾ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಸರಣಿಯಿಂದ ಹೊರಬಿದ್ದಿದ್ದು ಟೆಸ್À್ಟ ಪಂದ್ಯಕ್ಕೆ ಆಯ್ಕೆಯಾಗುವ ಮೂಲಕ ಭಾರತ ತಂಡದ ಬಲವನ್ನು ಹೆಚ್ಚಿಸುವ ಸೂಚನೆ ನೀಡಿದ್ದರಾದರೂ ಬೆಂಗಳೂರಿನ ಎನ್‍ಸಿಎ ಫಿಟ್ನೆಸ್ ಸೆಂಟರ್‍ನಲ್ಲಿ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಬಳಿ ತರಬೇತಿ ಪಡೆಯುತ್ತಿರುವ ರೋಹಿತ್ ಶರ್ಮಾ ಇನ್ನು ಪೂರ್ಣ ಫಿಟ್ನೆಸ್ ಆಗದಿರುವುದರಿಂದ ಆಸ್ಟ್ರೇಲಿಯಾ ಸರಣಿಯಿಂದ ಅವರು ಬಹುತೇಕ ಹೊರಬೀಳುವ ಮೂಲಕ ಭಾರತ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ.

ಇನ್ನು ವೇಗಿ ಇಶಾಂತ್ ಶರ್ಮಾ ಕೂಡ ಬೆನ್ನು ನೋವಿನಿಂದ ಬಳಲುತ್ತಿರುವುದರಿಂದ ಅವರ ಅನುಪಸ್ಥಿತಿಯು ಭಾರತ ತಂಡವನ್ನು ತುಂಬಾ ಕಾಡಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡದ ನಿರ್ವಹಣೆ ತೀರಾ ಕಳಪೆಯಾಗಿದ್ದರೂ ಕಳೆದ ಬಾರಿಯ ಸರಣಿ ಜಯಿಸಿರುವ ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾ ಈ ಬಾರಿಯೂ ಏಕದಿನ, ಟ್ವೆಂಟಿ-20 , ಟೆಸ್ಟ್ ಸರಣಿಗಳನ್ನು ಗೆದ್ದು ಬೀಗುವ ಹುಮ್ಮಸ್ಸಿನಲ್ಲಿತ್ತಾದರೂ ಈಗ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಇಶಾಂತ್ ಶರ್ಮಾ ಹೊರಗುಳಿದಿರುವುದರಿಂದ ತಂಡದ ಮೇಲೆ ಪರಿಣಾಮ ಬೀರಿದೆ.

ಅಲ್ಲದೆ ಮೊದಲ ಟೆಸ್ಟ್‍ನ ನಂತರ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇಲೆ ತವರಿಗೆ ಹಿಂದುರಿಗುವುದರಿಂದ ಅವರ ಅನುಪಸ್ಥಿತಿಯು ತಂಡಕ್ಕೆ ತುಂಬಾ ಹೊರೆ ಆಗುವುದರಿಂದ ಈಗಾಗಲೇ ಆಸ್ಟ್ರೇಲಿಯಾ ತಂಡವು ಟೆಸ್ಟ್ ಸರಣಿಯನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ