ಬೆಂಗಳೂರು, ಜು.12- ಹಿರಿಯ ಸಾಹಿತಿ ಡಾ.ಜಿ.ಕೃಷ್ಣಪ್ಪ ಅವರು ರಚಿಸಿರುವ ಕುವೆಂಪು ಹನುಮದ್ದರ್ಶನ(ಶ್ರೀ ರಾಮಾಯಣ ದರ್ಶನಂ-ಒಂದು ಚಿತ್ರಣ) ಗ್ರಂಥ ವನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಲೋಕಾರ್ಪಣೆ ಮಾಡಿದರು.
https://youtu.be/I1U-UG-NHuk
ನಗರದಲ್ಲಿಂದು ತಮ್ಮ ನಿವಾಸದಲ್ಲಿ ಆನ್ ಲೈನ್ ಮೂಲಕವೇ ಬಿಡುಗಡೆ ಮಾಡಿದ ಅವರು, ಶ್ರೀ ರಾಮಾಯಣ ದರ್ಶನಂ ವಿಶೇಷ ಗ್ರಂಥವಾಗಿದ್ದು, ಡಾ.ಜಿ.ಕೃಷ್ಣಪ್ಪ ಅವರು ಹನುಮದ್ದರ್ಶನ ಕುರಿತು ಹೆಚ್ಚಿನ ಮಾಹಿತಿ ಬೆಳಕು ಚೆಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಜತೆಗಿದ್ದರು. ಆನ್ ಲೈನ್ ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಭರಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.