ಹಾವೇರಿ: ಇಲ್ಲಿಯ ತಹಶೀಲ್ದಾರ್ ಕಚೇರಿಯು ಹಲವು ವರ್ಷಗಳಿಂದ ಶಿಥಿಲ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಮಸ್ಯೆಯಾಗಿದೆ. ಕಂದಾಯ ದಾಖಲೆಗಳು ಒದ್ದೆಯಾಗುವ ಭೀತಿ ಒಂದೆಡೆಯಿದ್ದರೆ, ಮತ್ತೊಂದೆಡೆ ಬಕೆಟ್ ಇರಿಸಿ ನೀರು ಸಂಗ್ರಹಿಸಿ ಚೆಲ್ಲಬೇಕಿದೆ.
ಕೊಡೆ ಹಿಡಿದು ಕೆಲಸ ಮಾಡಬೇಕಿದೆ.
‘ಪ್ರತಿ ವರ್ಷ ಮಳೆಗಾಲದಲ್ಲಿ ಕಟ್ಟಡ ಸೋರುತ್ತದೆ. ಕಚೇರಿ ಸ್ಥಳಾಂತರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಸೋರುವಕಡೆಯಲ್ಲ ಬಕೆಟ್ ಇಡುತ್ತೇವೆ. ಕಂದಾಯ ದಾಖಲೆಗಳು ಒದ್ದೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ನೌಕರರು ತಿಳಿಸಿದರು.
‘ಶಾಸಕ ರುದ್ರಪ್ಪ ಲಮಾಣಿ ಅವರು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ತುರ್ತು ದುರಸ್ತಿಗೆ ₹ 8 ಲಕ್ಷ ಅನುದಾನ ಕೊಡುವ ಭರವಸೆ ನೀಡಿದ್ದರು. ಆದರೆ, ನಂತರ ಯಾವ ಪ್ರಕ್ರಿಯೆಯೂ ನಡೆಯಲಿಲ್ಲ’ ಎಂದು ಅವರು ದೂರಿದರು.