ಕಾಗವಾಡ: ತಾಲ್ಲೂಕಿನ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿದ್ದು, ಪ್ರಮುಖ ಐದು ರಸ್ತೆಗಳ ಮೇಲೆ ನದಿಯ ನೀರು ಹರಿಯುತ್ತಿದ್ದರಿಂದ ಸಂಚಾರ ಬಂದ್ ಮಾಡಲಾಗಿದೆ.
ತಾಲ್ಲೂಕಿನ ಅಥಣಿ-ಕಾತ್ರಾಳ, ಉಗಾರ ಬಿ.ಕೆ. ಕುಸುನಾಳ, ಉಗಾರ ಬಿ.ಕೆ- ಶಿರಗುಪ್ಪಿ,ಕಾತ್ರಾಳ-ಬಣಜವಾಡ, ಮೋಳವಾಡ-ಇಂಗಳಿ ರಸ್ತೆಗಳು ಜಲಾವೃತ ಆಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕಾಗವಾಡ ಪಿಎಸ್‌ಐ ಎಂ.ಬಿ. ಬಿರಾದಾರ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಿಬ್ಬಂದಿ ನಿಯೋಜಿಸಿ ಸಂಚಾರ ಬಂದ್ ಮಾಡಿದ್ದಾರೆ.

ತಾಲ್ಲೂಕಿನ ನದಿ ತೀರದ ಗ್ರಾಮಗಳಾದ ಕಾತ್ರಾಳ, ಐನಾಪುರ, ಕೃಷಾ ಕಿತ್ತೂರು, ಬಣಜವಾಡ, ಜೂಗುಳ, ಉಗಾರ, ಮೊಳವಾಡ, ಕುಸುನಾಳ, ಗ್ರಾಮಗಳ ಸಾವಿರಾರು ರೈತರು ಬೆಳದ ಸಾವಿರಾರು ಎಕರೆ ಬೆಳೆ ನದಿ ನೀರಿನಿಂದ ಜಲಾವೃತವಾಗಿವೆ. ತೋಟದ ವಸತಿ ಜನರು ತಮ್ಮ ಸಾಮಾನು, ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.ಕೃಷ್ಣಾ ನದಿಯ ನೀರು ಹೆಚ್ಚಳವಾದರೆ ಇನ್ನು ಅನೇಕ ರಸ್ತೆಗಳು, ಗ್ರಾಮಗಳು ಮುಳುಗುವ ಆಂತಕ ನದಿ ತೀರದ ಜನರಲ್ಲಿ ಉಂಟಾಗಿದೆ.
Laxmi News 24×7