ನವದೆಹಲಿ: 2019-20ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ₹779 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ಗೆ, ಆದಾಯ ತೆರಿಗೆ ಇಲಾಖೆಯು ಷೋಕಾಸ್ ನೋಟಿಸ್ ನೀಡಿದೆ.
‘ಈ ಮೊತ್ತದಲ್ಲಿ ಬಡ್ಡಿಯೂ ಸೇರಿದೆ.
ತೆರಿಗೆ ಪಾವತಿ ಬಾಕಿ ಸಂಬಂಧ ಕಂಪನಿ ವಿರುದ್ಧ ದಂಡಾರ್ಹ ಪ್ರಕ್ರಿಯೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಈ ನೋಟಿಸ್ ನೀಡಲಾಗಿದೆ’ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.