Breaking News

ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂದ್ಕೊಂಡಿರ್ಲಿಲ್ಲ – ಮಗಳ ಎಂಗೇಜ್ಮೆಂಟ್‍ನಂದೇ ನೋಟಿಸ್ ಕೊಟ್ಟಿದ್ದಾರೆ

Spread the love

ಕಲಬುರಗಿ: ಒಂದು ವರ್ಷದಿಂದ ಸುಮ್ಮನೆ ಇದ್ದವರು ನನ್ನ ಮನೆಯಲ್ಲಿ ಕಾರ್ಯಕ್ರಮ ಇದ್ದಾಗಲೇ ನೋಟಿಸ್ ಕೊಡಲು ಬಂದಿದ್ದಾರೆ. ನನಗೆ ಚಳಿ ಯಾವುದು, ಮಳೆ ಯಾವುದು ಗೊತ್ತಿಲ್ಲ. ಎಲ್ಲವನ್ನೂ ಒಂದೇ ರೀತಿಯಾಗಿ ಅನುಭವಿಸಿದ್ದೇನೆ. ನನ್ನ ಮೇಲೆ ಎಫ್‍ಐಆರ್ ಹಾಕಿದ್ದೇ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಬಿಐ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮನೆಯಲ್ಲೆ ನನ್ನ ಮಗಳ ಎಂಗೆಜ್ಮೆಂಟ್ ಕಾರ್ಯಕ್ರಮ ಇದ್ದಾಗ ಮನೆ ಬಾಗಿಲಿಗೆ ಬಂದು ನೋಟಿಸ್ ಕೊಡ್ತಾರೆ. ನಾಳೆ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗೋದಕ್ಕೆ ಹೊಗ್ತಿದ್ದೇನೆ. ನಮ್ಮ ಅಭಿಮಾನಿಗಳು ಕಾರ್ಯಕರ್ತರು ಯಾರೂ ಸಿಬಿಐ ಆಫಿಸ್ ಗೆ ಬರಬಾರದು. ಯಾರು ಕೂಡ ಹೇಳಿಕೆ ಕೊಡಬಾರದು ಎಂದು ಹೇಳುತ್ತಾ ಸಿಬಿಐ ಕಚೇರಿಗೆ ಬರದಂತೆ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡರು.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ