ಬೆಂಗಳೂರು : ಇದೆ ಜುಲೈ 15 ರಂದು ಸೋಮವಾರದಂದು ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳುತ್ತಿದ್ದು ಈ ವಿಚಾರವಾಗಿ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈಗಾಗಲೇ ಬಿಗ್ ಪ್ಲಾನ್ ಮಾಡಿಕೊಂಡಿದ್ದು, ಅಧಿವೇಶನ ಆರಂಭದಲ್ಲಿ ಯಾವುದೇ ಪ್ರತಿಭಟನೆ ಧರಣಿ ನಡೆಸಿದಂತೆ ಕೇಂದ್ರ ಸಚಿವರು ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸದನದಲ್ಲಿ ಮೂಡ ಸೈಟ್ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು ಎರಡು ಹಗರಣಗಳ ಬಗ್ಗೆ ನಿಲುವಳಿ ಮಂಡನೆ ಮೂಲಕ ಚರ್ಚೆಗೆ ನಿರ್ಧರಿಸಿದ್ದು, ಈ ವಿಷಯಗಳನ್ನ ಪ್ರಸ್ತಾಪಿಸಲು ಬಿಜೆಪಿ ಹಾಗೂ ಜೆಡಿಎಸ್ ನಿರ್ಧಾರ ಮಾಡಿದೆ. ಉಳಿದಂತೆ ಎಸ್ಸಿ ಎಸ್ಟಿ, ಟಿಎಸ್‌ಪಿ ಅನುದಾನ ಬಳಕೆ, ಬೆಲೆ ಏರಿಕೆ ಕಾನೂನು ಮತ್ತು ಸುವ್ಯವಸ್ಥೆ, ಮತ್ತಿತರ ವಿಷಯಗಳು ಸನ್ನಿವೇಶ ಆಧಾರಿತವಾಗಿ ಪ್ರಸ್ತಾಪಿಸಲು ವಿಪಕ್ಷಗಳು ಇದೀಗ ತೀರ್ಮಾನಿಸಿವೆ.
Laxmi News 24×7