Breaking News

ಭ್ರೂಣಹತ್ಯೆ ಆರೋಪಿಗೆ ಹೂಮಳೆ ಸ್ವಾಗತ ;

Spread the love

ಬೆಳಗಾವಿ : ಹಣದ ಆಸೆಗಾಗಿ ಭ್ರೂಣಹತ್ಯೆ ಹಾಗೂ ಶಿಶು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದ ಕಿತ್ತೂರಿನ ನಕಲಿ ವೈದ್ಯನೆ ಊರಿನ ಜನ ಹೂ ಮಳೆ ಸ್ವಾಗತ ಕೋರಿರುವ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಕಲಿ ವೈಧ್ಯಕೀಯ ವೃತ್ತಿ ನಡೆಸುತ್ತಿದ್ದ ಆರೋಪಿ ಅಬ್ದುಲ್ ಲಾಡಖಾನ್ ಎಂಬಾತ ಭ್ರೂಣಹತ್ಯೆ ನಡೆಸುತ್ತಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ತಿಗಡೊಳ್ಳಿ ಗ್ರಾಮದ ತೋಟದ ಮನೆ ಆವರಣದಲ್ಲಿ ಹೂತಿದ್ದ ಮೂರು ಭ್ರೂಣಗಳ ಅವಶೇಷಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ‌ಯಶಸ್ವಿಯಾಗಿದ್ದರು.

ಜೈಲಿನಿಂದ ಹೊರಬಂದ ಭ್ರೂಣಹತ್ಯೆ ಆರೋಪಿಗೆ ಹೂಮಳೆ ಸ್ವಾಗತ ; ವೀರರ ನಾಡಿನಲ್ಲಿ ಇದೆಂತ ವಿಕೃತಿ..? – VIDEO

ಸಧ್ಯ ಈ ನಕಲಿ ವೈದ್ಯ ಜೈಲಿನಿಂದ ಹೊರಬಂದಿದ್ದು ಆತನಿಗೆ ಸ್ನೇಹಿತರು ಹೂ ಚೆಲ್ಲಿ ಸ್ವಾಗತ ಕೋರಿದ್ದಾರೆ. ಹಣಕ್ಕಾಗಿ ಬಡ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರಿಂದ ಶಿಶುಗಳನ್ನು ಪಡೆದುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಗೆ ಜನ ಅದ್ಧೂರಿ ಸ್ವಾಗತ ನೀಡಿದ್ದು, ಇದರಿಂದ ನಾಗರಿಕ ಸಮಾಜ ತಕೆತಗ್ಗಿಸುವಂತಾಗಿದೆ.


Spread the love

About Laxminews 24x7

Check Also

ಅಭಿವೃದ್ಧಿಯ ಹರಿಕಾರರು ಶೋಷಿತ ವರ್ಗಗಳ ಆಶಾಕಿರಣ ಬಡವರ ಬಂಧು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಜನ್ಮದಿನಾಚರಣೆ ಸಂಭ್ರಮ

Spread the loveದೇವನಹಳ್ಳಿ:  ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ