ಬೆಳಗಾವಿ : ಬೆಳಗಾವಿಯ ಹುಕ್ಕೇರಿ ತಾಲೂಕಿನಲ್ಲಿ ಶಂಕಿತ ಡೆಂಘಿ ಜ್ವರಕ್ಕೆ ಬಾಲಕಿ ಬಲಿ**
ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಶಂಕಿತ ಡೆಂಘಿ ಜ್ವರಕ್ಕೆ ಬಾಲಕಿ ಸಾವನ್ನಪ್ಪಿದ್ದಾಳೆ. 11 ವರ್ಷದ ಶ್ರೇಯಾ ಕೃಷ್ಣಾ ದೇವದಾತೆ, ತಂದೆ, ಡೆಂಗಿ ಜ್ವರದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶ್ರೇಯಾ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ನಿವಾಸಿಯಾಗಿದ್ದು, ಥೈಪಾಡ್‌ನಿಂದ ಬಳಲುತ್ತಿದ್ದಳು. ಈ ಕುರಿತು, ಡಿಹೆಚ್ಒ ಮಹೇಶ ಕೋಣಿ, ಜಿ ಬಿ ಏನ್ 7 ನ್ಯೂಸ್ ಗೆ ಬಾಲಕಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ದುರ್ಘಟನೆಯು ಡೆಂಘಿ ಜ್ವರದ ತೀವ್ರತೆಗೆ ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿದೆ.