Breaking News

ಇಂದಿರಾ ಕ್ಯಾಂಟೀನ್‌ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

Spread the love

ಳಕಲ್‌: ‘ಬಡವರಿಗೆ, ಕೂಲಿಕಾರರಿಗೆ ರಿಯಾಯ್ತಿ ದರದಲ್ಲಿ ಊಟ, ಉಪಹಾರ ನೀಡುವ ಇಂದಿರಾ ಕ್ಯಾಂಟಿನ್‌ ಹುನಗುಂದದಲ್ಲಿ ಮಂಜೂರಾಗಿದ್ದರೂ, ಹಿಂದಿನ ಸರ್ಕಾರ ಹಾಗೂ ಆಗಿನ ಶಾಸಕರು ದುರುದ್ದೇಶದಿಂದ ಆರಂಭಿಸಿರಲಿಲ್ಲ’ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

 

ಅವರು ಮಂಗಳವಾರ ಇಲ್ಲಿಯ ಪೊಲೀಸ್‌ ಠಾಣೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್‌ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಕೆಲವೇ ತಿಂಗಳುಗಳಲ್ಲಿ ಕ್ಯಾಂಟಿನ್‌ ಅರಂಭವಾಗಲಿದೆ. ಕೇವಲ ₹ 5 ಮತ್ತು ₹ 10 ಕ್ಕೆ ಉಪಾಹಾರ ಹಾಗೂ ಊಟ ನೀಡುವ ಈ ಯೋಜನೆ ಬಡವರಿಗೆ ಅತ್ಯಂತ ಉಪಯುಕ್ತವಾಗಿದೆ’ ಎಂದರು.

ಪೌರಾಯುಕ್ತ ಶ್ರೀನಿವಾಸ ಜಾಧವ, ನಗರಸಭೆ ಸದಸ್ಯರಾದ ಅಮೃತ್‌ ಬಿಜ್ಜಳ, ಮೌಲಪ್ಪ ಬಂಡಿವಡ್ಡರ್‌, ಸುಧಾರಾಣಿ ಸಂಗಮ, ಅಬ್ಬು ಹಳ್ಳಿ, ಮಲ್ಲು ಮಡಿವಾಳರ, ಮುಖಂಡರಾದ ಮಹಾಂತೇಶ ನರಗುಂದ, ಮಲ್ಲಿಕಾರ್ಜುನ ಅಗ್ನಿ ಇದ್ದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ 2305 ಕಿ.ಮೀ.ಹೈವೇ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ: ನಿತಿನ್ ಗಡ್ಕರಿ

Spread the loveನವದೆಹಲಿ, (ಆಗಸ್ಟ್ 20): ಕರ್ನಾಟಕ ರಾಜ್ಯದಲ್ಲಿ ಸುಮಾರು 48,428 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಮಾರು 2,305 ಕಿಲೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ