ಧಾರಾಕಾರ ಮಳೆ ಹಿನ್ನೆಲೆ: ಕರ್ನಾಟಕ-ಗೋವಾ ರಾಜ್ಯ ಹೆದ್ದಾರಿಯಲ್ಲಿ ಪ್ರಪಾತಕ್ಕೆ ಉರಳಿದ ಲಾರಿ
ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ, ಕರ್ನಾಟಕ-ಗೋವಾ ರಾಜ್ಯ ಹೆದ್ದಾರಿಯ ಚೊರ್ಲಾ ಬಳಿ ಭೀಕರ ಘಟನೆ ನಡೆದಿದೆ. ರಸ್ತೆ ಪಕ್ಕದ ಮಣ್ಣು ಕುಸಿದು, ಲಾರಿ ಪ್ರಪಾತಕ್ಕೆ ಉರಳಿದೆ.
ಘಟನೆಯ ತಕ್ಷಣ, ಜೆಸಿಬಿ ಸಹಾಯದಿಂದ ಲಾರಿಯನ್ನು ಪಕ್ಕಕ್ಕೆ ತರುವ ಕಾರ್ಯಾಚರಣೆ ಆರಂಭಗೊಂಡಿತು. ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಲಾರಿ ಉರಳಿ ಬೀಳುವ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಕರ್ನಾಟಕದ ಗಡಿ ಭಾಗದಲ್ಲಿ ನಡೆದ ಈ ಘಟನೆ ಹಲವು ಪ್ರಯಾಣಿಕರಿಗೆ ತೀವ್ರ ಆತಂಕ ಮೂಡಿಸಿದೆ. ಘಟನೆ ನಡೆದ ಸ್ಥಳದಲ್ಲಿ ರಸ್ತೆಯ ಅಸುರಕ್ಷತೆ ಹಾಗೂ ನಿರಂತರ ಮಳೆಯಿಂದ ಉಂಟಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಜನತೆಯನ್ನು ಎಚ್ಚರಿಸಿದ್ದಾರೆ.